ನ್ಯೂಸ್

ಪ್ರಾದೇಶಿಕ ನ್ಯಾಯ ಟೀಮ್​ ಮೋದಿ ಧ್ಯೇಯ

ನವದೆಹಲಿ: ಮುಂಬರುವ ರಾಜ್ಯ ಚುನಾವಣೆಗಳ ಮೇಲೆ ದೃಷ್ಟಿ, ಸರ್ಕಾರದಲ್ಲಿ ಪಾಲುದಾರ ಮಿತ್ರಪಕ್ಷಗಳನ್ನು ತೃಪ್ತಿ ಪಡಿಸುವ ಗುರಿ, 2 ವರ್ಷಗಳ ಆಡಳಿತಾವಧಿಯಲ್ಲಿ ಕಂಡು ಬಂದ ದುರ್ಬಲ ಕೊಂಡಿಗಳನ್ನು ಕಳಚಿಕೊಂಡು ಸಚಿವ ಸಂಪುಟದ ವರ್ಚಸ್ಸು ಹೆಚ್ಚಿಸುವ ಧ್ಯೇಯ, ಇವೆಲ್ಲದರ ಜತೆಗೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ, ಜಾತಿವಾರು ಆದ್ಯತೆ, ಯುವಶಕ್ತಿಗೆ ಮನ್ನಣೆಯಂಥ ಹತ್ತುಹಲವು ಆಶೋತ್ತರಗಳನ್ನು ಬಲಗೊಳಿಸುತ್ತ ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಸಂಕಲ್ಪದ ರಾಜಮಾರ್ಗದಲ್ಲಿ ಸರ್ಕಾರವನ್ನು ಮುನ್ನಡೆಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೊಡ್ಡ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ನಡೆಸಿದ್ದಾರೆ.

2019ರಲ್ಲಿ 2ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಇದೇ ಮೊದಲ ಬಾರಿಗೆ ನಡೆಸಿದ ಸಂಪುಟ ಪುನಾರಚನೆಯಲ್ಲಿ 36 ಹೊಸಬರಿಗೆ ಸ್ಥಾನ ನೀಡಿದ್ದಾರೆ. ಸಂಪುಟ ದರ್ಜೆಗೆ ಬಡ್ತಿ ಪಡೆದ 7 ಸಚಿವರೂ ಸೇರಿ 43 ಮಂದಿ ನೂತನ ಸಚಿವರಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಡಿ.ವಿ. ಸದಾನಂದಗೌಡ, ರವಿಶಂಕರ ಪ್ರಸಾದ್​, ಪ್ರಕಾಶ್​ ಜಾವಡೇಕರ್​ ಸಹಿತ 12 ಹಿರಿಯ ಸಚಿವರು ಪದತ್ಯಾಗ ಮಾಡಿದ್ದಾರೆ. ಸಂಪುಟ ಪುನಾರಚನೆ ಬಳಿಕ ಎಸ್​ಸಿ, ಎಸ್​ಟಿ, ಹಿಂದುಳಿದ ಸಮುದಾಯಕ್ಕೆ ಬರೋಬ್ಬರಿ 47 ಸ್ಥಾನ ದಕ್ಕಿದರೆ, ಮುಸ್ಲಿಂ, ಸಿಖ್​ ಸಮುದಾಯದ ತಲಾ ಓರ್ವ, ಬೌದ್ಧ ಸಮುದಾಯಕ್ಕೆ 2 ಸ್ಥಾನ ಒಲಿದಿದೆ. ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ರಾಜ್ಯಕ್ಕೆ ಹೊಸದಾಗಿ 4 ಸಚಿವ ಸ್ಥಾನ ಸಿಕ್ಕಿದೆ. ಆ ಮೂಲಕ ಮೋದಿ ಸಂಪುಟದಲ್ಲಿ ಕರ್ನಾಟಕದ ಪ್ರಾತಿನಿಧ್ಯ 6ಕ್ಕೇರಿದೆ.

ಹನ್ನೆರಡು ಸಚಿವರ ಪದತ್ಯಾಗ

ಡಿ.ವಿ. ಸದಾನಂದಗೌಡ, ರವಿಶಂಕರ್​ ಪ್ರಸಾದ್​, ತಾವರ್​ ಚಂದ್ರ ಗೆಹಲೋತ್​, ರಮೇಶ್​ ಪೋಖ್ರಿಯಾಲ್​ ನಿಶಾಂಕ್​, ಹರ್ಷವರ್ಧನ್​, ಪ್ರಕಾಶ್​ ಜಾವಡೇಕರ್​, ಸಂತೋಷ್​ ಕುಮಾರ್​ ಗಂಗ್ವಾರ್​, ಬಾಬೂಲ್​ ಸುಪ್ರಿಯೊ, ಧೋತ್ರೆ ಸಂಜಯ್​ ಶಾಮರಾವ್​, ರತನ್​ ಲಾಲ್​ ಕಟಾರಿಯಾ, ಪ್ರತಾಪ್​ ಚಂದ್ರ ಸಾರಂಗಿ, ಸುಶ್ರೀ ದೇಬಶ್ರೀ ಚೌಧರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಿರಿಯ ಸಚಿವರಾದ ರವಿಶಂಕರ್​ ಪ್ರಸಾದ್​, ಹರ್ಷವರ್ಧನ್​ , ಡಿ.ವಿ.ಸದಾನಂದಗೌಡ ಅವರ ಪದತ್ಯಾಗ ಅಚ್ಚರಿ ಮೂಡಿಸಿದೆ. ರಾಜೀನಾಮೆ ನೀಡಿದ ಪ್ರಮುಖ ಸಚಿವರಿಗೆ ಶ್ರೀದಲ್ಲೇ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಅಮಿತ್​ ಷಾಗೆ ಸಹಕಾರ

* ಅಮಿತ್​ ಷಾ-ಗೃಹ, ಸಹಕಾರ

* ಅಶ್ವಿನಿ ವೈಷ್ಣವ್​-ರೈಲ್ವೆ, ಐಟಿ, ಸಂವಹನ

* ಧಮೇರ್ಂದ್ರ ಪ್ರಧಾನ್​-ಶಿಕ್ಷಣ, ಕೌಶಲಾಭಿವೃದ್ಧಿ

* ಹರ್ದೀಪ್​ ಸಿಂಗ್​ ಪುರಿ-ನಗರಾಭಿವೃದ್ಧಿ, ಗೃಹ, ಪೆಟ್ರೋಲಿಯಂ

* ಜ್ಯೋತಿರಾದಿತ್ಯ ಸಿಂಧಿಯಾ-ವಿಮಾನಯಾನ,

* ಮನಸುಖ್​ ಮಾಂಡವ್ಯ-ಆರೋಗ್ಯ

53 ಸಚಿವರು

ಬುಧವಾರದ ಪುನಾರಚನೆ ಬಳಿಕ ಕೇಂದ್ರ ಸಂಪುಟದಲ್ಲಿ ಪ್ರಧಾನಿ ಸಹಿತ ಒಟ್ಟು 53 ಸಚಿವರಿದ್ದು, ಒಟ್ಟು 81 ಸಚಿವರನ್ನು ಹೊಂದಲು ಅವಕಾಶವಿದೆ. ಅಂದರೆ, ಇನ್ನೂ 28 ಸಚಿವ ಸ್ಥಾನಗಳು ಖಾಲಿ ಇದೆ.

ಸಂಪುಟ ಸ್ವಾರಸ್ಯ

* 43-ಪ್ರಮಾಣ ವಚನ ಸ್ವೀಕರಿಸಿದವರು

* 36-ಸಚಿವರಾದ ಹೊಸಬರು

* 07-ಬಡ್ತಿ ಪಡೆದ ಸಚಿವರು

* 11-ಸಂಪುಟದಲ್ಲಿರುವ ಒಟ್ಟು ಮಹಿಳೆಯರು

* 14- ಒಟ್ಟು 14 ಸಚಿವರು 50 ವರ್ಷಕ್ಕಿಂತ ಕೆಳಗಿನವರು

* 13 -ವಕೀಲರು,

* 06-ವೈದ್ಯರು

* 05-ಇಂಜಿನಿಯರ್​

*07-ನಾಗರಿಕ ಸೇವೆಗಳಲ್ಲಿದ್ದವರು

ನಾಲ್ವರಿಗೂ ರಾಜ್ಯ ದರ್ಜೆ

* ರಾಜೀವ್​ ಚಂದ್ರಶೇಖರ್​- ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಜತೆಗೆ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ

* ಶೋಭಾ ಕರಂದ್ಲಾಜೆ-ಕೃಷಿ, ರೈತ ಕಲ್ಯಾಣ

* ನಾರಾಯಣಸ್ವಾಮಿ-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

* ಭಗವಂತ ಖೂಬಾ-ಹೊಸ ಮತ್ತು ನವೀಕೃತ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ

* ಸಂಪುಟ ದರ್ಜೆ ಸಚಿವರಾದ ಪ್ರಲ್ಹಾದ್​ ಜೋಶಿ, ನಿರ್ಮಲಾ ಸೀತಾರಾಮನ್​ ಖಾತೆಗಳು ಬದಲಿಲ್ಲ

ಕ್ಯಾಬಿನೆಟ್​ ದರ್ಜೆಗೆ ಬಡ್ತಿ

* ಅನುರಾಗ್​ ಠಾಕೂರ್​

* ಕಿಶನ್​ ರೆಡ್ಡಿ

* ಕಿರಣ್​ ರಿಜಿಜು

* ಹರ್ದೀಪ್​ ಸಿಂಗ್​ ಪುರಿ

* ಮನ್​ಸುಖ್​ ಮಾಂಡವ್ಯ

* ಆರ್​.ಕೆ.ಸಿಂಗ್​

* ಪಶೋರ್ತ್ತಮ್​ ರೂಪಾಲ

ಆರಕ್ಕೇರಿದ ಕರ್ನಾಟಕ

ಕೇಂದ್ರ ಸಂಪುಟ ಪುನಾರಚನೆ ವೇಳೆ ರಾಜ್ಯದಲ್ಲಿ ಇದೇ ಮೊದಲ ಬಾರಿ ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕಕ್ಕೂ ಪ್ರಾಶಸ ಸಿಕ್ಕಿದೆ. ಪ್ರಹ್ಲಾದ್​ ಜೋಶಿ ಹಾಗೂ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್​ ಸೇರಿ ಇದೀಗ ರಾಜ್ಯದ ಆರು ಜನರಿಗೆ ಮೋದಿ ಟೀಮ್​ನಲ್ಲಿ ಸ್ಥಾನ ಸಿಕ್ಕಿದೆ.

ಹೊಸ ಸಚಿವರು

1.ನಾರಾಯಣ ಸ್ವಾಮಿ&ಚಿತ್ರದುರ್ಗ

2.ಶೋಭಾ ಕರಂದ್ಲಾಜೆ

ಉಡುಪಿ, ಚಿಕ್ಕಮಗಳೂರು

3.ಭಗವಂತ ಖೂಬಾ&ಬೀದರ್​

4.ರಾಜೀವ ಚಂದ್ರಶೇಖರ್​

ರಾಜ್ಯಸಭೆ ಸದಸ್ಯ

5. ಪ್ರಲ್ಹಾದ್​ ಜೋಶಿ&ಧಾರವಾಡ

6.ನಿರ್ಮಲಾ ಸೀತಾರಾಮನ್​

ರಾಜ್ಯಸಭೆ ಸದಸ್ಯೆ

ಡಿವಿಎಸ್​ ರಾಜೀನಾಮೆ ಏಕೆ? * ಜಾತಿ ಲೆಕ್ಕಾಚಾರದೊಂದಿಗೆ ಸಚಿವ ಸ್ಥಾನವನ್ನು ಹಿಂಪಡೆದಿರುವ ಸಾಧ್ಯತೆ * ರೈಲ್ವೆ ಸಚಿವರಾಗಿದ್ದಾಗ ನಿರೀತ ಮಟ್ಟದಲ್ಲಿ ನಿರ್ವಹಣೆ ತೋರಿಲ್ಲ ಎಂಬ ಅಭಿಪ್ರಾಯವಿತ್ತು

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ರಾಜೀವ್​ ಚಂದ್ರಶೇಖರ್​, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಹಾಗೂ ಭಗವಂತ ಖೂಬಾ ಅವರಿಗೆ ಅಭಿನಂದನೆಗಳು. ದೇಶದ ಹಾಗೂ ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಯಶಸ್ವಿ ಕಾರ್ಯ ನಿರ್ವಹಣೆ ಮಾಡಲಿ ಎಂದು ಶುಭ ಹಾರೈಸುತ್ತೇನೆ. | ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿ

ಜಾತಿ ಪ್ರಾತಿನಿಧ್ಯ * 12-ಎಸ್​ಸಿ * 8-ಎಸ್​ಟಿ * 27-ಒಬಿಸಿ * 1-ಮುಸ್ಲಿಂ * 1-ಸಿಖ್​ * 1-ಕೆಸ್ತ * 2-ಬೌದ್ಧ