ನ್ಯೂಸ್

ಅತಿ ದೊಡ್ಡ ಕೊವಿಡ್​-19 ಕೇರ್​ ಸೆಂಟರ್​​ಗೆ ಅಮಿತ್​ ಷಾ, ಅರವಿಂದ್​ ಕೇಜ್ರಿವಾಲ್​ ಜಂಟಿ ಭೇಟಿ...

ನವದೆಹಲಿ: ದೆಹಲಿ- ಹರಿಯಾಣ ಗಡಿಯಲ್ಲಿರುವ ಛತ್ತರ್​ಪುರದ ರಾಧಾ ಸ್ವಾಮಿ ಸತ್ಸಂಗ ಬ್ಯಾಸ್​ನಲ್ಲಿರುವ ಜಗತ್ತಿನ ಅತಿದೊಡ್ಡ ಕೊವಿಡ್​-19 ಕೇರ್​ ಸೆಂಟರ್​ಗೆ ಇಂದು ಗೃಹ ಸಚಿವ ಅಮಿತ್​ ಷಾ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.

10,000 ಕ್ಕೂ ಹೆಚ್ಚು ಬೆಡ್​ಗಳ ವ್ಯವಸ್ಥೆ ಇರುವ ಕೊವಿಡ್​-19 ಕೇರ್​ ಸೆಂಟರ್​ ಪರಿಶೀಲನೆಗೆ ಆಗಮಿಸುವಂತೆ ಅರವಿಂದ್​ ಕೇಜ್ರಿವಾಲ್​ ಅವರು ಅಮಿತ್​ ಷಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಅಷ್ಟೇ ಅಲ್ಲ ಈ ಸೆಂಟರ್​ಗೆ ಇಂಟೋ-ಟಿಬೆಟಿಯನ್​ ಬಾರ್ಡರ್ ಪೊಲಿಸರನ್ನು​​ ಮತ್ತು ಸೇನಾ ಆಸ್ಪತ್ರೆಯ ವೈದ್ಯರು, ದಾದಿಯರನ್ನು ನಿಯೋಜಿಸಿ ಎಂದು ಕೇಳಿಕೊಂಡಿದ್ದರು. ಅದನ್ನು ಕೇಂದ್ರ ಸರ್ಕಾರ ಈಡೇರಿಸಿದೆ.

ಈಗ ಇಲ್ಲಿ 2000ಕ್ಕೂ ಹೆಚ್ಚು ಇಂಡೋ-ಟಿಬೆಟಿಯನ್​ ಬಾರ್ಡರ್​ ಪೋಲಿಸ್​ ಸೇರಿ ಸಿಎಪಿಎಫ್​ ಸಿಬ್ಬಂದಿ, ವೈದ್ಯರು, ನರ್ಸ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ದೆಹಲಿಯಲ್ಲಿ ಕೊವಿಡ್​-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಛತ್ತರ್​ಪುರದ ರಾಧಾ ಸ್ವಾಮಿ ಸತ್ಸಂಗ ಕೇಂದ್ರವನ್ನು ಕೊವಿಡ್-19 ಸೆಂಟರ್​ ಆಗಿ ಪರಿವರ್ತಿಸಲಾಗಿದೆ. (ಏಜೆನ್ಸೀಸ್)