ಅಮಿತ್​ ಶಾ 
ನ್ಯೂಸ್

ಲವ್ ಜಿಹಾದ್ ಪ್ರಚೋದಿಸಿದ ಸೋರೆನ್ ವಿರುದ್ಧ ಅಮಿತ್ ಶಾ ಕಿಡಿ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆದಿವಾಸಿಗಳ ಸ್ಥಿತಿಗತಿಗಳತ್ತ ಗಮನ ಹರಿಸುವ ಬದಲು 'ಲ್ಯಾಂಡ್ ಜಿಹಾದ್' ಮತ್ತು 'ಲವ್ ಜಿಹಾದ್'ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇಂತಹ ಮನೋಸ್ಥಿತಿಯಿಂದ ಭೂಮಿ ಮತ್ತು ಜನಸಂಖ್ಯೆಯ ನಡುವಿನ ಸಮತೋಲನ ಹಾಳಾಗುತ್ತಿದೆ. ಸಾವಿರಾರು ಅತಿಕ್ರಮಣಕಾರರು ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳನ್ನು ಮದುವೆಯಾಗಿ ಪ್ರಮಾಣ ಪತ್ರ ಪಡೆದು ಭೂಮಿ ಖರೀದಿಸುತ್ತಿದ್ದಾರೆ. ಈಗಾಗಲೇ ಬುಡಕಟ್ಟು ಜನಸಂಖ್ಯೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಬುಡಕಟ್ಟು ಜನಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ವೇತಪತ್ರ ಬಿಡುಗಡೆ ಮಾಡಿ ಆದಿವಾಸಿಗಳಿಗೆ ಜಮೀನು, ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಶನಿವಾರ ರಾಂಚಿಯಲ್ಲಿ ನಡೆದ ಜಾರ್ಖಂಡ್ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಜೆಎಂಎಂ-ಕಾಂಗ್ರೆಸ್ ಮೈತ್ರಿ ಭ್ರಷ್ಟವಾಗಿದೆ. ಆದಿವಾಸಿಗಳ ವಿರುದ್ಧ ಕೆಲಸ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಮತದಾರರ ಬಳಿ ತೆರಳಿ ಹೇಮಂತ್ ಸೊರೇನ್ ಸರ್ಕಾರದ ವೈಫಲ್ಯಗಳನ್ನು ಜನರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.