ನ್ಯೂಸ್

ಪಾರ್ಟಿಯಿಂದ ಹೊರಬರುವಾಗ ಎಡವಿದ ಅಮೀರ್, ಎಣ್ಣೆ ಮತ್ತಿನಲ್ಲಿ ತೇಲಾಡುತ್ತಿದ್ದಾರೆಂದು ಕಾಮೆಂಟ್​ ಮಾಡಿದ ನೆಟ್ಟಿಗರು..!

ಅಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಅದರ ಹೊರತಾಗಿ, ಅವರು ಕೆಲವು ಚಿತ್ರಗಳಿಗಾಗಿ ಮಾತುಕತೆ ನಡೆಸುತ್ತಿದ್ದಾರೆ. ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಬಿಡುವಿನ ಸಮಯದಲ್ಲಿ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಿಗೆ ಹಾಜರಾಗುತ್ತಾರೆ.


ಅಂತಯೇ ನಿನ್ನೆ ಸಂಜೆ ಅಮೀರ್ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಪಾರ್ಟಿ ಮುಗಿಸಿ ಹೋಗುವ ವೇಳೆ ಅಮೀರ್ ಖಾನ್‌ ಸಮತೋಲನವನ್ನು ಕಳೆದುಕೊಂಡು ಎಡವಿದ್ದಾರೆ. ನೆಟಿಜನ್‌ಗಳು ಅವರು ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.


ಅಮೀರ್ ಖಾನ್ ನಿನ್ನೆ ತಡರಾತ್ರಿ ಪಾರ್ಟಿಯಿಂದ ಹೊರಡುತ್ತಿರುವುದು ಕಂಡುಬಂದಿದೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದಂತೆ ಭಾಸವಾಗುತ್ತಿದೆ. ಪಾರ್ಟಿಯಿಂದ ಹೊರಬರುವಾಗ ಅಮಿರ್‌ ಎಡವಿದ ವಿಡಿಯೋ ಕಂಡು ಜನರು ಈ ರೀತಿಯಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.


ಸೂಪರ್‌ಸ್ಟಾರ್ ಕುಡಿದಿದ್ದೀರಾ ಎಂದು ರೆಡ್ಡಿಟರ್ ಪೋಸ್ಟ್ ಮಾಡಲಾಗಿದೆ. ಅಮೀರ್​​ ಪಾರ್ಟಿ ಮುಗಿಸಿ ತೆರಳುತ್ತಿದ್ದಾಗ, ಯಾರೋ ಪಾರ್ಟಿಗೆ ಪ್ರವೇಶಿಸುತ್ತಿದ್ದರು ಮತ್ತು ಅವರು ಸ್ವಲ್ಪ ಹಿಂದೆ ಸರಿದರು, ಆದರೆ ಸ್ವಲ್ಪ ಎಡವಿದರು. ಅವರು ಚಿಕ್ಕ ಕುರ್ತಾ ಮತ್ತು ಡೆನಿಮ್ ಧರಿಸಿದ್ದರು. ಅವರು ತಮ್ಮ ಥಗ್ಸ್ ಆಫ್ ಹಿಂದೂಸ್ತಾನ್ ಲುಕ್, ಗುಂಗುರು ಕೂದಲು ಮತ್ತು ಮೀಸೆಯನ್ನು ಹೊಂದಿದ್ದರು.