ಮುಂಬೈ: ಬಾಲಿವುಡ್ನ ಹಿರಿಯ ನಟ ಅಮೀರ್ ಖಾನ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಗೆ ಬುಧವಾರ ಭೇಟಿ ನೀಡಿದ್ದರು. ಸಿಎಂ ನಿವಾಸದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಆಶೀರ್ವಾದ ಪಡೆಯಲು ಈ ಭೇಟಿ ನಡೆಯಿತು.
ಅಮೀರ್ ಶ್ವೇತವರ್ಣದ ಕುರ್ತಾ, ಪೈಜಾಮಾ, ಕನ್ನಡಕದೊಂದಿಗೆ ಬಂದಿದ್ದು ಗಮನಸೆಳೆಯಿತು. ಅಮೀರ್ ಮುಖ್ಯಮಂತ್ರಿಯವರ ನಿವಾಸಕ್ಕೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ನೋಡಲು ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಮುಗಿಬಿದ್ದರು. ಗಣೇಶ ಹಬ್ಬಕ್ಕೆ ಬಂದ ಅಮೀರ್ ಆಗಮನದ ಫೋಟೋಗಳು ಸ್ವಲ್ಪಹೊತ್ತಿನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳುರಾರಾಜಿಸಿದವು. ನಿವಾಸದ ಹೊರಗೆ ಮುಖ್ಯಮಂತ್ರಿ ಶಿಂಧೆ ಅಮೀರ್ ರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಅಮೀರ್ ಖಾನ್ ಗಣೇಶ ಚತುರ್ಥಿ ಆಚರಣೆಯಲ್ಲಿ ಪಾಲ್ಗೊಳ್ಳಲು ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್ ಅವರ ಮನೆಗೆ ಸಹ ಭೇಟಿ ನೀಡಿ ಗಣೇಶ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಅಮೀರ್ ಸಿಹಿತಿಂಡಿಗಳ ದೊಡ್ಡ ತಟ್ಟೆಯೊಂದಿಗೆ ಆಶಿಶ್ ಶೆಲಾರ್ ಅವರ ಮನೆಗೆ ಹೋಗುತ್ತಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).