ನ್ಯೂಸ್

ಚೀನಾ ಜನಸಂಖ್ಯೆಯಲ್ಲಿ ಭಾರೀ ಕುಸಿತ! ಮದುವೆಯಾಗಲಿರುವ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ದಂಪತಿಗೆ ನಗದು ಬಹುಮಾನ

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾದಲ್ಲಿ, 6 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜನಸಂಖ್ಯೆ ಕುಸಿತವಾಗಿದೆ. ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಚೀನಾದ ಜನಸಂಖ್ಯೆಯು ಆರು ದಶಕಗಳಲ್ಲಿ ಮೊದಲ ಬಾರಿಗೆ ಕಳೆದ ವರ್ಷ ಕುಗ್ಗಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ.


ಚೀನಾ ಜನಸಂಖ್ಯೆ ಅಧಿಕೃತ ಅಂಕಿಅಂಶಗಳು ಬಿಡುಗಡೆಯಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಮಕ್ಕಳ ಜನನದ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಚೀನಾ ಸರ್ಕಾರವು ಪೂರ್ವ ಚೀನಾದ ಕೌಂಟಿಯಲ್ಲಿ ದಂಪತಿಗೆ 1,000 ಯುವಾನ್ (137ಡಾಲರ್​) ಬಹುಮಾನವನ್ನು ಘೋಷಿಸಿದೆ.


ಚೀನಾ ಸರ್ಕಾರದ ಈ ಸೂಚನೆಯನ್ನು ಚಾಂಗ್‌ಶಾನ್ ಕೌಂಟಿಯ ಅಧಿಕೃತ WeChat ಖಾತೆಯಲ್ಲಿ ಕಳೆದ ವಾರ ಪ್ರಕಟಿಸಲಾಗಿದೆ.
ಮದುವೆಯಾಗಲಿರುವ ವಧುವಿನ ವಯಸ್ಸು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಈ ಬಹುಮಾನ ಸಿಗಲಿದೆ, ಯುವಕರನ್ನು ಮದುವೆಯಾಗಲು ಪ್ರೋತ್ಸಾಹಿಸುವ ಹೊಸ ಮಾರ್ಗವಾಗಿದೆ ಎಂದು ಹೇಳಲಾಗಿದೆ.


ದಂಪತಿಗಳಿಗೆ ಆರ್ಥಿಕ ಪ್ರೋತ್ಸಾಹ ಮತ್ತು ಉತ್ತಮ ಶಿಶುಪಾಲನಾ ಸೌಲಭ್ಯಗಳು ಸೇರಿದಂತೆ ಜನನ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ತಕ್ಷಣದ ಕ್ರಮಗಳನ್ನು ಪ್ರಯತ್ನಿಸುತ್ತಿದೆ.


ವಿವಾಹದ ಕಾನೂನುಬದ್ಧ ವಯಸ್ಸು ಪುರುಷರಿಗೆ 22 ವರ್ಷಗಳು ಮತ್ತು ಮಹಿಳೆಯರಿಗೆ 20 ವರ್ಷಗಳು. ಆದರೆ, ದೇಶದಲ್ಲಿ ವಿವಾಹವಾಗುವ ಜೋಡಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಚೀನಾದ ಮದುವೆ ದರವು 2022 ರಲ್ಲಿ 6.8 ಮಿಲಿಯನ್‌ಗೆ ಇಳಿದಿದೆ. ಇದು 1986ರಿಂದೀಚಿಗೆ ಅತಿ ಕಡಿಮೆ ಎಂದು ಹೇಳಬಹುದು. ಕಳೆದ ವರ್ಷ 800,000 ಕಡಿಮೆ ಮದುವೆಗಳು ನಡೆದಿವೆ.


ಅಲ್ಲದೇ ಚೀನಾ ಒಂದು ಮಗುವಿನ ನೀತಿಯನ್ನು 1980ರ ದಶಕದಲ್ಲಿ ಜಾರಿಗೆ ತಂದಿತ್ತು. ಇದೂ ಸಹ ಜನಸಂಖ್ಯೆಯ ಇಳಿಕೆಗೆ ಕಾರಣವಾಗಿತ್ತು.