ನ್ಯೂಸ್

ರಿಲೇಷನ್​ಶಿಪ್​ ವದಂತಿ ನಡುವೆಯೇ ವಿಜಯ್​ ಕುಟುಂಬದವರೊಂದಿಗೆ Pushpa 2 ವೀಕ್ಷಿಸಿದ ರಶ್ಮಿಕಾ ಮಂದಣ್ಣ

ಹೈದರಾಬಾದ್​: ಅಲ್ಲು ಅರ್ಜುನ್​- ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa 2) ಡಿಸೆಂಬರ್​ 05ರಂದು ವಿಶ್ವದಾದ್ಯಂತ ತೆರೆ ಕಂಡಿದ್ದು, ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ರಿಲೀಸ್​ ಆದ ಮೊದಲ ದಿನವೇ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದ ಹೊರತಾಗಿಯೂ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು, ಮೊದಲ ದಿನವೇ ದಾಖಲೆ ಬರೆದಿದೆ.

ಇನ್ನೂ ಪುಷ್ಪ 2 (Pushpa 2)ಚಿತ್ರವನ್ನು ನಾಯಕಿ ರಶ್ಮಿಕಾ ವಿಜಯ್​ ದೇವರಕೊಂಡ ಕುಟುಂಬಸ್ಥರೊಂದಿಗೆ ವೀಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇವರಿಬ್ಬರು ರಿಲೇಷನ್​ಶಿಪ್​ನಲ್ಲಿರುವ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ರಶ್ಮಿಕಾ ಮಂದಣ್ನ (Rashmika Mandanna) ಹಾಗೂ ವಿಜಯ್​ ದೇವರಕೊಂಡ (Vijay Devarakonda) ಹಲವು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿದ್ದಾರೆ ಎಂಬ ಸುದ್ದಿ ಆಗಿಂದಾಗೆ ಕೇಳಿ ಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಕದ್ದು ಮುಚ್ಚಿ ವಿದೇಶದಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್​ ಆಗುತ್ತಿದ್ದವು. ಇದೀಗ ಇವರಿಬ್ಬರು ಓಪನ್ ಆಗಿ ಸುತ್ತಾಟ ನಡೆಸುತ್ತಿದ್ದು, ವಿಜಯ್​ ದೇವರಕೊಂಡ ಕುಟುಂಬಸ್ಥರೊಂದಿಗೆ ರಶ್ಮಿಕಾ ಪುಷ್ಪ 2 (Pushpa 2) ಚಿತ್ರವನ್ನು ವೀಕ್ಷಿಸಿರುವುದು.

ರಶ್ಮಿಕಾ ಹೈದರಾಬಾದ್​ನ ಎಎಂಬಿ ಸಿನಿಮಾಸ್​ನಲ್ಲಿ (ಏಷಿಯನ್ ಮಹೇಶ್ ಬಾಬು) ಚಿತ್ರ ವೀಕ್ಷಿಸಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಹಾಗೂ ವಿಜಯ್ ಸಹೋದರ ಆನಂದ್ ಅವರು ರಶ್ಮಿಕಾ ಜೊತೆ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ರಶ್ಮಿಕಾ ವಿಜಯ್​ ದೇವರಕೊಂಡ ಕುಟುಂಬಸ್ಥರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಈ ಫೋಟೋ ವೈರಲ್​ ಆದ ಬಳಿಕ ಫ್ಯಾನ್ಸ್​ ಸಿಹಿಸುದ್ದಿ ಯಾವಾಗ ಎಂದು ಕೇಳುತ್ತಿದ್ದಾರೆ. ರಶ್ಮಿಕಾ ಹಾಗೂ ವಿಜಯ್​ ತಮ್ಮ ನಡುವಿನ ಸಂಬಂಧದ ಬಗ್ಗೆ ಇನ್ನಷ್ಟೇ ಖಚಿತಪಡಿಸಬೇಕಿದೆ.