ಮುಂಬೈ: ಮೊಬಿಯಸ್ ಎಮರ್ಜಿಂಗ್ ಆಪರ್ಚುನಿಟೀಸ್ ಫಂಡ್ ಕಂಪನಿಯ ಅಧ್ಯಕ್ಷ ಮಾರ್ಕ್ ಮೊಬಿಯಸ್ ಅವರು ದೀರ್ಘಾವಧಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬುಲಿಶ್ ಆಗಿದ್ದಾರೆ. ಪ್ರಪಂಚದಾದ್ಯಂತದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ಉಂಟಾಗುವ ಅಪಾಯಗಳಿಂದ ಭಾರತೀಯ ಮಾರುಕಟ್ಟೆಯು ಪ್ರತ್ಯೇಕವಾಗಿದೆ ಎಂದು ಅವರು ಹೇಳುತ್ತಾರೆ.
ಮಾಧ್ಯಮವೊಂದರ ಜತೆ ಮಾತನಾಡಿದ ಮೊಬಿಯಸ್ ಅವರು, 2024-25ನೇ ಹಣಕಾಸು ವರ್ಷದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಒಂದು ಜಾಗತಿಕ ಮಾರುಕಟ್ಟೆಯನ್ನು ಆಯ್ಕೆ ಮಾಡುವುದಾದರೆ, ಅದು ಭಾರತವಾಗಿರುತ್ತದೆ ಎಂದಿದ್ದಾರೆ.
ಮಿಡ್ ಕ್ಯಾಪ್ಸ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳ ಆದಾಯದ ನಿರೀಕ್ಷೆಗಳ ಕುರಿತು ಮಾತನಾಡಿದ ಅವರು, ಈ ಕಂಪನಿಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ ಮತ್ತು ಹೆಚ್ಚು ಸಂಶೋಧನೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ. ಯಾರಾದರೂ ಈ ಕಂಪನಿಗಳ ಕುರಿತು ಸಂಶೋಧನೆ ಮಾಡಲು ಸಿದ್ಧರಿದ್ದರೆ, ಅದು ತುಂಬಾ ಲಾಭದಾಯಕವಾಗಿದೆ. ಏಕೆಂದರೆ ಯಾರಾದರೂ ಸರಿಯಾದ ಸ್ಟಾಕ್‌ಗಳನ್ನು ಕಂಡುಕೊಂಡರೆ, ಆ ಷೇರುಗಳು ಭವಿಷ್ಯದಲ್ಲಿ ನಿಫ್ಟಿ 50 ಸದಸ್ಯರಾಗಬಹುದು ಎಂದು ಅವರು ಹೇಳಿದ್ದಾರೆ.
ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ತುಂಬಾ ಚೆನ್ನಾಗಿ ಕಾಣುತ್ತಿದೆ, ವಿಶೇಷವಾಗಿ ಐಸಿಐಸಿಐ ಬ್ಯಾಂಕ್ ಇಷ್ಟಪಟ್ಟಿದ್ದೇನೆ ಎಂದು ಮೊಬಿಯಸ್ ಹೇಳಿದ್ಧಾರೆ.
ಇತರ ಕೆಲವು ಬ್ಯಾಂಕ್‌ಗಳು ಸಹ ಬಹಳ ಆಸಕ್ತಿದಾಯಕವಾಗಿ ಕಾಣುತ್ತಿವೆ. ಅಲ್ಲದೆ, ಇದು ಭಾರತದ ಆರ್ಥಿಕತೆಯ ಪ್ರತಿಬಿಂಬವಾಗಿದೆ, ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೊಬಿಯಸ್ ಅಭಿಪ್ರಾಯಪಟ್ಟಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ದೀರ್ಘಾವಧಿಯ ದೃಷ್ಟಿಕೋನದ ಕುರಿತು ಪ್ರತಿಕ್ರಿಯಿಸಿದ ಮೊಬಿಯಸ್, ಇದು ಉತ್ತಮ ಹೂಡಿಕೆ ಎಂದು ತಾವು ನಂಬಿದ್ದಾಗಿ ಹೇಳಿದರು. ಇದು ತಿದ್ದುಪಡಿಯನ್ನು ನೋಡಿರುವುದರಿಂದ ಇದನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ಖರೀದಿಸಬಹುದು ಎಂದು ಸಲಹೆ ನೀಡಿದ್ದಾರೆ.
ಬ್ಯಾಂಕ್‌ಗಳ ಹೊರತಾಗಿ, ಮೊಬಿಯಸ್ ಭಾರತೀಯ ರೈಲ್ವೆಯಲ್ಲಿ ಆಸಕ್ತಿ ತೋರಿದ್ದಾರೆ. ಭಾರತೀಯ ರೈಲ್ವೇಗೆ ಹೆಚ್ಚಿನ ಮೂಲಸೌಕರ್ಯಗಳ ಅಗತ್ಯವು ಉದ್ಭವಿಸುತ್ತದೆ. ಇದು ಟಾಟಾ ಸ್ಟೀಲ್ ಸ್ಟಾಕ್ ಏರಿಕೆ ಕಾರಣವಾಗುತ್ತದೆ ಎಂದು ಮೊಬಿಯಸ್ ಹೇಳಿದ್ದಾರೆ.
ಭಾರತೀಯ ಮಾರುಕಟ್ಟೆಗೆ ಕೆಲವು ಸ್ಟಾಕ್ ಐಡಿಯಾಗಳನ್ನು ಪಟ್ಟಿ ಮಾಡುತ್ತಾ, ಮೊಬಿಯಸ್ ಅವರು ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ಭಾರತೀಯ ರೈಲ್ವೇಸ್ ಮತ್ತು ಐಸಿಐಸಿಐ ಬ್ಯಾಂಕ್‌ಗೆ ಲಿಂಕ್ ಮಾಡಿದ ಷೇರುಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು.