ಬೆಂಗಳೂರು: ನೂರು ಜನ್ಮಕೂ...ನೂರಾರೂ ಜನ್ಮಕೂ ಹಾಡು ಕೇಳಿದ್ರೆ ರಮೇಶ್ ಅರವಿಂದ್ ಮತ್ತು ಹೇಮ ಪ್ರಭಾತ್ ಸಹ ನೆನಪಾಗುತ್ತಾರೆ. ಅಮೆರಿಕಾ ಅಮೆರಿಕಾ ಸಿನಿಮಾದ ಭೂಮಿಕಾ ಪಾತ್ರದ ಮೂಲಕ ಕನ್ನಡಿಗರ ಮನಸು ಗೆದ್ದ ನಟಿ ಹೇಮಾ ಪ್ರಭಾತ್.
ನಟನೆಯಿಂದ ದೂರವೇ ಉಳಿದಿರುವ ಹೇಮಾ ಪ್ರಭಾತ್ ತಮ್ಮ ವೈವಾಹಿಕ ಜೀವನದಿಂದ ಹೆಚ್ಚು ಸುದ್ದಿಯಾಗಿದ್ದರು. ಅಮೇರಿಕಾ ಅಮೇರಿಕಾ ಬಳಿಕ ಸುಮೀಂದ್ರ ಪಂಚಮುಖಿ ಎನ್ನುವವರ ಜೊತೆ ಮದುವೆಯಾಗಿ ಅಮೆರಿಕಾದಲ್ಲಿ ಸೆಟಲ್ ಆಗಿದ್ದ ನಟಿ, ಬಳಿಕ ಕುಟುಂಬ ಕಲಹದಿಂದಾಗಿ ಡಿವೋರ್ಸ್ ಪಡೆದು, ಭಾರತಕ್ಕೆ ಬಂದು ವರ್ಷಗಳ ಬಳಿಕ ನಟ ಸುಮಂತ್ ಆಲಿಯಾಸ್ ಪ್ರಶಾಂತ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಹೇಮಾ ಮತ್ತು ಅವರ ಪತಿ ಪ್ರಶಾಂತ್ ಇಬ್ಬರೂ ಸಹ ಭರತನಾಟ್ಯ ಡ್ಯಾನ್ಸರ್ ಆಗಿದ್ದು, ಇಬ್ಬರು ಜೊತೆಯಾಗಿ ಸೇರಿ ಸುಕೃತಿ ನಾಟ್ಯಾಲಯ ಎಂಬ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು,ಹಲವಾರು ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.
ಹೇಮಾ 5 ವರ್ಷದ ಹಿಂದೆ ಮತ್ತೆ ಕಿರುತೆರೆಯ ರಕ್ಷಾ ಬಂಧನ ಧಾರಾವಾಹಿಯಲ್ಲಿ ನಟಿಸುವ ಮೂಲಕ 15 ವರ್ಷಗಳ ಬಳಿಕ ನಟನೆಗೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ 5 ವರ್ಷದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಖಾಸಗಿವಾಹಿನಿಯಲ್ಲಿ ಪ್ರಸಾರವಾತ್ತಿದ್ದ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಕರಿಮಣಿ ಮೂಲಕ ಮತ್ತೆ ನಟನಾ ಲೋಕಕ್ಕೆ ಕಾಲಿಟ್ಟಿರುವ ಹೇಮಾ ಈ ಬಗ್ಗೆ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಮಾಹಿತಿ ನೀಡಿದ್ದಾರೆ.
ಸಿನಿಮಾ ರಂಗದಿಂದ ದೂರ ಇದ್ದ ನಟಿ ಈಗ ಮತ್ತೆ ವೀಕ್ಷಕರ ಮುಂದೆ ಬರುತ್ತಿದ್ದಾರೆ. ಅಮೆರಿಕಾ ಅಮೆರಿಕಾ, ಗೋಲಿಬಾರ್, ದೊರೆ, ಸಂಭ್ರಮ, ರವಿಮಾಮ ಸಿನಿಮಾಗಳಲ್ಲಿ ನಟಿಸಿದ್ದಾರೆ.