ನ್ಯೂಸ್

ಬಾಲಿವುಡ್ ಭಾಯ್​ಜಾನ್​ಗೆ ಕೂಡಿಬಂತು ಕಂಕಣ ಭಾಗ್ಯ; Salman Khan ಕೈ ಹಿಡಿಯಲಿರುವ ಚೆಲುವೇ ಇವರೇ ನೋಡಿ

ಮುಂಬೈ: ಬಾಲಿವುಡ್​ನ ಭಾಯ್​ಜಾನ್​, ದಿ ಮೋಸ್ಟ್ ಎಲಿಜೆಬಲ್​ ಬ್ಯಾಚುಲರ್ ಎಂದೇ ಖ್ಯಾತಿ ಪಡೆದಿರುವ ಸಲ್ಮಾನ್​ ಖಾನ್​ (Salman Khan) ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಕೆಲಸ ಬ್ಯುಸಿಯಿರುವ ಸಲ್ಮಾನ್,​ ಕೆಲ ತಿಂಗಳ ಹಿಂದೆ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ಕಿ ಶೂಟೌಟ್​ ವಿಚಾರವಾಗಿ ಸದ್ದು ಮಾಡಿದ್ದರು. ಇದೀಗ ಮದುವೆ ವಿಚಾರವಾಗಿ ಸಲ್ಮಾನ್​ ಖಾನ್ ಹೆಸರು ಸೌಂಡ್ ಮಾಡುತ್ತಿದ್ದು, ಭಾಯ್​ಜಾನ್​ನ ಕೈ ಹಿಡಿಯುವ ನಟಿ ಇವರೇನಾ ಎಂದು ಅನುಮಾನ ಮೂಡಲು ಶುರುವಾಗಿದೆ.

2023ರಲ್ಲಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದ ಗದರ್ ಚಿತ್ರದ ಮೂಲಕ ಕಮ್​ಬ್ಯಾಕ್​ ಮಾಡಿದ್ದ ನಟಿ ಅಮೀಷಾ ಪಟೇಲ್ (Ameesha Patel) ಕೆಲ ದಿನಗಳ ಹಿಂದೆ ಅಭಿಮಾನಿಗಳು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದು,​ ಸಲ್ಮಾನ್​ ಖಾನ್ (Salman Khan) ಜೊತೆಗಿನ​ ಮದುವೆ ವಿಚಾರವನ್ನು ರಿವೀಲ್​ ಮಾಡಿದ್ದಾರೆ. ಬಿ ಟೌನ್ ಅಂಗಳದಲ್ಲಿ ಈ ವಿಚಾರ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಮೀಷಾ ಪಟೇಲ್, ಸಲ್ಮಾನ್ ಅವರನ್ನು ಮದುವೆಯಾಗುವಂತೆ ಅಭಿಮಾನಿಗಳು ಕೇಳುತ್ತಿರುವುದು ನಿಜಕ್ಕೂ ಒಳ್ಳೆಯದು. ಇಬ್ಬರೂ ಸಮರ್ಥರು ನೋಡಲು ತುಂಬಾ ಚೆನ್ನಾಗಿ ಕಾಣುತ್ತೀರಿ, ಮದುವೆಯಾಗಿ ಒಳ್ಳೆಯ ಮಕ್ಕಳನ್ನು ಹೊಂದಿ ಎಂದು ಅಭಿಮಾನಿಗಳು ಹೇಳಿದ್ದು, ಜನರು ಸುಂದರ ವ್ಯಕ್ತಿಗಳನ್ನು ಒಟ್ಟಿಗೆ ನೋಡಲು ಇಷ್ಟಪಡುತ್ತಾರೆ. ಈ ಹಿಂದೆ ಹೃತಿಕ್​ರನ್ನು ಮದುವೆಯಾಗುವಂತೆ ಅಭಿಮಾನಿಗಳು ಹೇಳಿದ್ದರು ಎಂದು ನಟಿ ಸಂದರ್ಶನದ ವೇಳೆ ನೆನಪಿಸಿಕೊಂಡಿದ್ದಾರೆ.

2024ರಲ್ಲಿ ನಟಿ ಆಮೀಷಾ ಪಟೇಲ್​ ಟ್ವಿಟರ್​ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಅಭಿಮಾನಿಯೊಬ್ಬರು ಸಲ್ಮಾನ್ ಖಾನ್ ಅವರನ್ನು ಮದುವೆಯಾಗುತ್ತೀರಾ ಎಂದು ಕೇಳಿದರು. ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅಮೀಶಾ, ಇದು ಯಾವುದಾದರೂ ಚಿತ್ರದ ಪ್ರಾಜೆಕ್ಟ್‌ಗಾಗಿ ಅಭಿಮಾನಿಗಳು ಕೇಳಿದ್ದಾರೆ ಎಂದು ನಾನು ಭಾವಿಸಿದ್ದೆ.. ಆದರೆ ನಾವು ಇಬ್ಬರೂ ಇನ್ನೂ ಒಂಟಿಯಾಗಿದ್ದೇವೆ.. ಆದ್ದರಿಂದ ಮದುವೆಯಾದರೇ ಸುಖವಾಗಿರುಬಹುದು ಎಂಬುದು ಫ್ಯಾನ್ಸ್‌ ಅಭಿಪ್ರಾಯವಾಗಿತ್ತು ಎಂದು ನಟಿ ಅಮೀಷಾ ಪಟೇಲ್ ಹೇಳಿದ್ದಾರೆ.