ನ್ಯೂಸ್

ಪ್ರಬುದ್ಧ ಸಮಾಜಕ್ಕೆ ನಾಂದಿಯಾದವರು ಅಂಬೇಡ್ಕರ್

Bengaluru - Political - Shivananda Tagadur

ಬೆಂಗಳೂರು:
ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸಮಾಜ ಸುಧಾರಣೆಗಾಗಿ ಮಾಡಿದ ಕೆಲಸಗಳನ್ನು ನಾವುಗಳು ಪರಿಪಾಲನೆ ಮಾಡಬೇಕಾಗಿದೆ ಎಂದು ತುಮಕೂರು ವಿದ್ಯಾಶಾಲೆಯ ಇ.ಸಿ.ಒ. ಮಂಜುನಾಥ್ ತಿಳಿಸಿದರು.
ತುಮಕೂರಿನ ದೇವರಾಯಪಟ್ಟಣ ಹೊಸಬಡಾವಣೆಯ ವಿದ್ಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ್ದ 134ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗರೀಕತೆ, ಕಾನೂನು ಬದ್ಧ ಸಮಾಜ ನಿಮಾಣಕ್ಕೆ ಸಂವಿಧಾನ ರಚನೆ ಮಾಡಿ, ಪ್ರಬುದ್ಧ ಸಮಾಜಕ್ಕೆ
ನಾಂದಿಯಾದವರು ಅಂಬೇಡ್ಕರ್ ಎಂದರು.
ಕಾಯಕ್ರಮದಲ್ಲಿ ವಿದ್ಯಾ ಶಾಲೆಯ ಸಂಯೋಜನಾಧಿಕಾರಿಗಳಾದ ಅಬ್ಬಾಸ್ ಸಾಬ್,ಪಿ.ಸಿ.ಒ. ಗಂಗಹನುಮಯ್ಯ, ನವೀನ್ ಕುಮಾರ್, ಗುರುಮೂರ್ತಿ ಹಾಗು ಬೋಧಕ ಬೋಧಕೇತರ ವರ್ಗದವರು ಭಾಗವಹಿಸಿದ್ದರು.