ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿದ ಸಮರ್ಥ್ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.  
ನ್ಯೂಸ್

ಅಂಬೇಡ್ಕರ್ ಹಾಗೂ ನಾರಾಯಣ ಗುರು ತತ್ವಾದರ್ಶಗಳಲ್ಲಿ ಸೌಮ್ಯತೆ

ಮಂಗಳೂರು: ನಾರಾಯಣ ಗುರುಗಳ ತತ್ವ ಆದರ್ಶಗಳು ಮತ್ತು ಅಂಬೇಡ್ಕರ್ ಅವರ ತತ್ವ ಆದರ್ಶಗಳಲ್ಲಿ ಸೌಮ್ಯತೆ ಇದೆ. ಇವರಿಬ್ಬರೂ ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಸಮಾಜದಲ್ಲಿ ಬದಲಾವಣೆ ಮಾಡಲು ಸಾಧ್ಯ ಎಂದು ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನನ ಹಾಗೂ ಬಾಲ್ಯ ಜೀವನ ಮತ್ತು ಶಿಕ್ಷಣದ ಹಂಬಲದ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದರೆ ಅವರು ಪಡೆದಷ್ಟು ಶಿಕ್ಷಣ ಪದವಿ ಯಾರು ಪಡೆದಿರಲು ಸಾಧ್ಯವಿಲ್ಲ. ಅಂಬೇಡ್ಕರ್ ಎಂಬ ಹೆಸರು ಕೇಳಿದಾಗ ಮೊದಲು ತಿಳಿಯುವುದು ಅಂಬೇಡ್ಕರ್ ಒಬ್ಬರು ಸಂವಿಧಾನ ಶಿಲ್ಪಿ, ಅಸ್ಪೃಶ್ಯತೆಯ ವಿರುದ್ಧ ದಲಿತರ ಪರವಾಗಿ ನಿಂತವರು, ಆದರೆ ಅಂಬೇಡ್ಕರ್ ಅವರು ಸಮಸ್ತ ಶೋಷಿತ ಅವಕಾಶ ವಂಚಿತ ಜನಗಳ ಪರವಾಗಿದ್ದವರು. ಮೇಲ್ವರ್ಗ ಮತ್ತು ಕೆಳವರ್ಗ ಅನ್ನುವುದು ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಇದೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಸುರೇಶ್ ಪೂಜಾರಿ ಇವರು ಮಾತನಾಡಿ ಇಂದಿನ ಈ ಕಾರ್ಯಕ್ರಮವು ಮಂಗಳೂರು ಘಟಕ ಆಯೋಜಿಸಿರುವುದು ಹೆಮ್ಮೆಯ ವಿಷಯ. ಇಂದು ನಾವು ಪಡೆದಿರುವ ಮೂಲಭೂತ ಸೌಕರ್ಯವಾಗಲಿ, ಧಾರ್ಮಿಕ ಹಾಗೂ ಶೈಕ್ಷಣಿಕ ಹಕ್ಕುಗಳಾಗಲಿ ಎಲ್ಲದಕ್ಕೂ ಸಂವಿಧಾನವೇ ಮೂಲ ಕಾರಣ ಎಂದರು.
ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಯುವವಾಹಿನಿ ಮಂಗಳೂರು ಘಟಕದ ಸದಸ್ಯ ರಾಜೇಂದ್ರ ಚಿಲಿಂಬಿ ಹಾಗೂ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶುಭಾ ರಾಜೇಂದ್ರ ದಂಪತಿಯ ಸುಪುತ್ರ ಸಮರ್ಥ್ ರಾಜೇಂದ್ರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿದ್ದು, ಈ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಸಮಾಜ ಸೇವಾ ನಿರ್ದೇಶಕರಾದ ದಿನೇಶ್ ಕಂದಾವರ ಸ್ವಾಗತಿಸಿದರು, ಘಟಕದ ಸದಸ್ಯರಾದ ಸತೀಶ್ ಕೆ. ಕಾರ್ಯಕ್ರಮದ ನಿರೂಪಣೆ ಮಾಡಿದರು, ಕಾರ್ಯದರ್ಶಿ ಉಷಾ.ಕೆ ಧನ್ಯವಾದ ಸಲ್ಲಿಸಿದರು.

ಅಂಬೇಡ್ಕರ್ ಆದರ್ಶ ಸದಾ ಪ್ರಸ್ತುತ

ನಾರಾಯಣ ಗುರುಗಳ ಹಾಗೂ ಅಂಬೇಡ್ಕರ್ ಅವರ ನೀತಿ -ತತ್ವಗಳಲ್ಲಿ ಸಾಮ್ಯತೆ ಇದ್ದರೂ, ಆದರೆ ನಾರಾಯಣ ಗುರುಗಳು ಕೆಳ ವರ್ಗದವರಿಗೆಂದೆ ಸಂಘರ್ಷರಹಿತವಾಗಿ ಪ್ರತ್ಯೇಕ ದೇವಸ್ಥಾನ ನಿರ್ಮಾಣ ಮಾಡಿ ಅಸ್ಪರ್ಶತೆಯನ್ನು ಪಾಲಿಸುವ ದೇವಸ್ಥಾನಗಳಿಗೆ ಹೋಗುವುದು ಬೇಡ. ಆದರೆ ಅಂಬೇಡ್ಕರ್ ಅವರು ಮೇಲ್ವರ್ಗ - ಕೆಳವರ್ಗ ಎಂಬ ಕಲ್ಪನೆ ನಾಶ ಮಾಡಬೇಕು ಎಲ್ಲಾ ದೇವಾಲಯಗಳಲ್ಲಿ ಸಮಾನತೆ ಹಾಗೂ ಮುಕ್ತ ಪ್ರವೇಶಕ್ಕೆ ಉಗ್ರ ಹೋರಾಟ ಮಾಡಿದವರು. ಅಂಬೇಡ್ಕರ್ ನೀತಿಗಳು ಯಾವತ್ತೂ ಎಕ್ಸ್ಪಯರಿ ಆಗದ ಔಷಧಿ, ಅದು ಅಂದಿಗೂ ಇಂದಿಗೂ ಸದಾ ಪ್ರಸ್ತುತ ಎಂದು ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಹೇಳಿದರು.