ನ್ಯೂಸ್

ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಬೌಂಡರಿ ಹಾಕಿಕೊಂಡಿರಲಿಲ್ಲ

ಇಂದು (ಶುಕ್ರವಾರ) ಅಂಬರೀಷ್ ಅವರ 69ನೇ ಹುಟ್ಟುಹಬ್ಬ. ಅವರಿಲ್ಲದ ಎರಡನೆಯ ಹುಟ್ಟುಹಬ್ಬ. ಅಂಬರೀಷ್ ಅಗಲಿಕೆಯ ಈ ಒಂದೂವರೆ ವರ್ಷಗಳಲ್ಲಿ ಅವರನ್ನು ಕನ್ನಡಿಗರು ನೆನಪಿಸಿಕೊಳ್ಳದ ದಿನಗಳೇ ಇಲ್ಲ. ಅದರಲ್ಲೂ ಈ ಸಂದರ್ಭದಲ್ಲಿ ಅವರು ಸ್ವಲ್ಪ ಜಾಸ್ತಿಯೇ ನೆನಪಾಗುತ್ತಿದ್ದಾರೆ. ಬಹುಶಃ ಈ ಲಾಕ್​ಡೌನ್ ಸಮಯದಲ್ಲಿ ಅವರು ಇದ್ದಿದ್ದರೆ, ಕಾರ್ವಿುಕರು ಮತ್ತು ತಂತ್ರಜ್ಞರು ಇಷ್ಟೊಂದು ಸಮಸ್ಯೆ ಎದುರಿಸಬೇಕಾಗಿರಲಿಲ್ಲವೇನೋ? ತಮ್ಮ ಶಕ್ತಿ ಬಳಸಿ ಕಷ್ಟದಲ್ಲಿ ಇರುವವರು, ಸ್ವಲ್ಪ ನೆಮ್ಮದಿ ಆಗಿರುವಂತೆ ನೋಡಿಕೊಳ್ಳುತ್ತಿದ್ದರೇನೋ? ಬರೀ ಇದೊಂದೇ ಕಾರಣಕ್ಕೆ ಅಲ್ಲ, ಅಂಬರೀಷ್ ಅವರು ತಮ್ಮ ಮಾತು, ಗುಣ, ವ್ಯಕ್ತಿತ್ವ, ಸ್ನೇಹಪರತೆ, ಚಿತ್ರಗಳು, ಅಭಿನಯ... ಹೀಗೆ ಹಲವು ವಿಷಯಗಳಿಂದ ಸುದ್ದಿಯಾಗಿದ್ದವರು. ಅವರ ಈ ಹುಟ್ಟುಹಬ್ಬದ ನೆನಪಲ್ಲಿ, ಕನ್ನಡ ಚಿತ್ರರಂಗದ ಹಲವು ಗಣ್ಯರು, ಅಂಬರೀಷ್ ಅವರನ್ನು ಬೇರೆಬೇರೆ ಕಾರಣಕ್ಕೆ ನೆನಪಿಸಿಕೊಂಡಿದ್ದಾರೆ.

ಬೌಂಡರಿ ಹಾಕಿಕೊಂಡಿರಲಿಲ್ಲ

ಒಬ್ಬ ನಟನಾಗಿ ಅಂಬರೀಷ್ ನಿರ್ವಹಿಸಿದ ಪಾತ್ರಗಳು ನನಗೆ ಯಾವಾಗಲೂ ಇಷ್ಟ. ಅವರು ಮಾಡಿದ ಪಾತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಲ್ಲ ಥರದ ಪಾತ್ರಗಳನ್ನೂ ಬಹಳ ಸಲೀಸಾಗಿ ಮಾಡುತ್ತಿದ್ದರು. ‘ಅಂತ’ದಂತಹ ರಾ ಸಿನಿಮಾಗಳಲ್ಲೂ ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು. ‘ಒಲವಿನ ಉಡುಗೊರೆ’ಯಂಥ ಸಾಫ್ಟ್ ಚಿತ್ರಗಳಲ್ಲೂ, ‘ಪುಗ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ’ ಕಾಮಿಡಿ ಚಿತ್ರಗಳಲ್ಲೂ ಸಲೀಸಾಗಿ ಅಭಿನಯಿಸುತ್ತಿದ್ದರು. ಒಬ್ಬ ನಟನಾಗಿ ಅವರು ಯಾವತ್ತೂ ಯಾವ ಬೌಂಡರಿಯನ್ನೂ ಹಾಕಿಕೊಂಡಿರಲಿಲ್ಲ.

| ಗಣೇಶ್

| ಚೇತನ್ ನಾಡಿಗೇರ್