ನ್ಯೂಸ್

ಪವನ್​ ಕಲ್ಯಾಣ್ ಭೇಟಿ ಮಾಡಿದ ಕ್ರಿಕೆಟಿಗ ಅಂಬಾಟಿ ರಾಯುಡು ಜನಸೇನಾ ಪಕ್ಷ ಸೇರ್ತಾರಾ ?

ಗುಂಟೂರು: ಜನಸೇನಾ ಪಕ್ಷದ ಅಧ್ಯಕ್ಷ ಪವನ್​ ಕಲ್ಯಾಣ್​ ಅವರನ್ನು ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ಜನಸೇನಾ ಪಕ್ಷದ ಮಂಗಳಗಿರಿ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಪವನ್​ ಕಲ್ಯಾಣ್​ ಭೇಟಿ ಮಾಡಿದ ರಾಯುಡು ಅರ್ಧ ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಸಿದ್ದಾರೆ. ಜನಸೇನಾ ಪಕ್ಷ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ ಸೇರಿ ರಾಜೀನಾಮೆ ನೀಡಿದ್ದ ಅಂಬಾಟಿ ರಾಯುಡು ದಿಢೀರ್​ ಪವನ್​​ ಕಲ್ಯಾಣ್​ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ನಾನು ವೈಎಸ್‌ಆರ್‌ಸಿಪಿ ಪಕ್ಷವನ್ನು ತೊರೆಯುತ್ತಿದ್ದು ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ ಎಂಬುದಾಗಿ ರಾಯುಡು ಎಕ್ಸ್​ ಮೂಲಕ ಹೇಳಿದ್ದರು. ಮುಂದಿನ ನಡೆ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು. ಆಂಧ್ರಪ್ರದೇಶ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಟಿಡಿಪಿ ಮತ್ತು ಜನಸೇನಾ ಒಳಗೊಂಡ ಮಹಾ ಮೈತ್ರಿ ರಚಿಸಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್​ ಪಕ್ಷದ ವಿರುದ್ಧ ಹೋರಾಡಲಿದೆ.