ಬೆಂಗಳೂರು: ರಾಜ್ಯದಲ್ಲಿರುವ ಪ್ರತಿಷ್ಠಿತ ಖಾಸಗಿ ಪಿಯು ಕಾಲೇಜುಗಳು ಎಸ್ಸೆಸ್ಸೆಲ್ಸಿ ಫಲಿತಾಂಶ ಬರುವುದಕ್ಕೂ ಮುನ್ನವೇ ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದರಿಂದ ಬಹುತೇಕ ಸೀಟುಗಳು ಭರ್ತಿಯಾಗಿದ್ದು, ಉಳಿದಿರುವ ಅಲ್ಪ ಸೀಟುಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಿರುವವರು ಕಾದಾಡಬೇಕಾದ ಪರಿಸ್ಥಿತಿ ನಿಮಾಣವಾಗಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕೃತವಾಗಿ ಆ.12 ರಂದು ಪ್ರವೇಶ ಪ್ರಕ್ರಿಯೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ, ಇದಕ್ಕೂ ಮೊದಲೇ ಬಹುತೇಕ ಪ್ರತಿಷ್ಠಿತ ಪಿಯು ಕಾಲೇಜುಗಳು ಆನ್ಲೈನ್ನಲ್ಲಿ ಪ್ರವೇಶ ಪ್ರಕ್ರಿಯೆ ಕುರಿತು ಜಾಹಿರಾತು ನೀಡಿ ಸೀಟುಗಳನ್ನು ಭರ್ತಿ ಮಾಡಿಕೊಂಡಿವೆ. ಇದರ ಪರಿಣಾಮ ಶೇ.98 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಹಾಗೂ ಅದರಲ್ಲೂ ತಾವು ಬಯಸಿದ ಕಾಂಬಿನೇಷನ್ ದೊರೆಯುವುದು ಕಷ್ಟವಾಗಿದೆ.
ಮಲ್ಲೇಶ್ವರ, ವಸಂತನಗರ, ಹೊಸೂರು ಮತ್ತು ಬನ್ನೇರುಘಟ್ಟದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಕಾಲೇಜುಗಳು ನೆಪ ಮಾತ್ರಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿದ್ದು, ಈ ಹಿಂದೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಮುಂದಾಗಿವೆ. ಕೇಂದ್ರ ಪಠ್ಯಕ್ರಮದ ಫಲಿತಾಂಶ ಬೇಗ ಬಂದ ಕಾರಣ ಆ ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದಾರೆ.
ಶೇ.90 ಅಂಕವಿದ್ದರೂ ಬೆಲೆ ಇಲ್ಲ!: ಪ್ರತಿವರ್ಷ ಕೆಲವು ಕಾಲೇಜುಗಳು ವಿಜ್ಞಾನ ಮತ್ತು ವಾಣಿಜ್ಯ ವಿಷಯಕ್ಕೆ ಕಟ್ಆಫ್ ನಿಗದಿ ಮಾಡುತ್ತವೆ. ಈ ವರ್ಷ ಕಳೆದ ವರ್ಷದ ಕಟ್ಆಫ್ ಅಂಕಗಳನ್ನೇ ಮುಂದುವರಿಸಲು ನಿರ್ಧರಿಸಿದೆ. ವಿಪರ್ಯåಸ ಎಂದರೆ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ್ದರೂ ಸಹ ಕೆಲವು ಕಾಲೇಜುಗಳಲ್ಲಿ ಸೀಟು ದೊರೆಯುವುದಿಲ್ಲ. ಮಲ್ಲೇಶ್ವರದಲ್ಲಿರುವ ಪ್ರತಿಷ್ಠಿತ ಕಾಲೇಜೊಂದು ವಿಜ್ಞಾನಕ್ಕೆ ಶೇ.98 ಅಂಕ ಗಳಿಸಿರುವವರಿಗೆ ಆದ್ಯತೆ ನೀಡಲಾಗುವುದು ಎಂದಿದೆ. ಅಲ್ಲದೆ ಕಳೆದ ವರ್ಷ ಕೊನೆಯದಾಗಿ ಶೇ.95 ಅಂಕಗಳಿಸಿದ ಅಭ್ಯರ್ಥಿಗೆ ಸೀಟು ನೀಡಿದೆ. ಇದು ಪ್ರತಿ ವರ್ಷದ ಗೋಳು. ಶೇ.90 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬೆಲೆಯೇ ಇಲ್ಲವೆ ಎಂದು ಪ್ರಶ್ನೆ ಮಾಡುತ್ತಾರೆ ಪಾಲಕರು.
ದೂರು ನೀಡಬಹುದು
ಅರ್ಹತೆ ಇದ್ದರೂ ವಿದ್ಯಾರ್ಥಿಗಳಿಗೆ ಸೀಟು ನೀಡಲು ನಿರಾಕರಿಸುವುದು ಹಾಗೂ ಹೆಚ್ಚಿನ ಶುಲ್ಕ ಪಡೆಯುವ ಕಾಲೇಜುಗಳ ವಿರುದ್ಧ ಪಾಲಕರು, ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆಗೆ ದೂರು ನೀಡಬಹುದು.
ವಿವಿಧೆಡೆ ಸಲ್ಲಿಸಿ
ಪಿಯು ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪ್ರಕಾರ ಅರ್ಜಿಗಳು ಆ.13ರಿಂದ ನಾಲ್ಕು ದಿನ ಮಾತ್ರ ವಿತರಣೆ ಮಾಡಿ ಆನಂತರ ಮೊದಲ ಆಯ್ಕೆ ಪಟ್ಟಿ ಬಿಡá-ಗಡೆ ಮಾಡುವಂತೆ ಸೂಚಿಸಿದೆ. ಕಾಲೇಜá-ಗಳು ಕಾಂಬಿನೇಷನ್ವಾರು ಸ್ವೀಕೃತವಾಗಿರುವ ಅರ್ಜಿಗಳನ್ನು ವಿಂಗ ಡಿಸಿ ಅತಿಹೆಚ್ಚು ಅಂಕಗಳಿಸಿರುವ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಕಡಿಮೆ ಅಂಕ ಪಡೆದಿರುವ ಅಭ್ಯರ್ಥಿಗಳಿಗೆ ಸೀಟು ದೊರೆಯದಿರಬಹುದು. ಆದ್ದರಿಂದ ವಿದ್ಯಾರ್ಥಿಗಳು ವಿವಿಧ ಕಾಲೇಜá-ಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ ಎನ್ನುತ್ತಾರೆ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರು.