ಹೈದರಾಬಾದ್: ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸೀಕ್ವೆಲ್ ಪುಷ್ಪ 2 ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ನಿಂದ ಸಮಯಮಾಡಿಕೊಂಡು ಮುದ್ದಾದ ಕುಟುಂಬದೊಂದಿಗೆ ಅಲ್ಲು ಅರ್ಜುನ್ ಯುರೋಪ್ ಪ್ರವಾಸದಲ್ಲಿದ್ದಾರೆ.
ಅಲ್ಲು ಅರ್ಜುನ್ ಮತ್ತು ಸ್ನೇಹಾರೆಡ್ಡಿ, ಈ ಕ್ಯೂಟ್ ಕಪಲ್ಗೆ ಅಲ್ಲು ಅಯಾನ್ ಮತ್ತು ಅಲ್ಲು ಅರ್ಹ ಎಂಬ ಇಬ್ಬರು ಮುದ್ದಾದ ಮಕ್ಕಳಿರುವುದು ಗೊತ್ತೆ ಇದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿತ್ತಾರೆ. ಕುಟುಂಬದ ಫೋಟೋಗಳು ಹಾಗೂ ವೀಡಿಯೊಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಕುಟುಂಬದೊಂದಿಗೆ ಯುರೋಪ್ನ ನಾರ್ವೆಯಲ್ಲಿ ಸಮಯಕಳೆಯುತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪೋಸ್ಟ್ ಮಾಡಿರುವ ಫೋಟೋವೊಂದರಲ್ಲಿ ಸ್ನೇಹ ಅಲ್ಲು ಅರ್ಜುನ್ ಅವರನ್ನು ಅಪ್ಪಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ಫೋಟೋದಲ್ಲಿ ಅಲ್ಲು ಅರ್ಹ ಕೂಡ ಕಾಣುತ್ತಿದ್ದಾರೆ. ಕಾಮ್ ಟು ಮೈ ಚೋಸ್ ಎಂಬ ಶಿರ್ಷಿಕೆ ಜತೆಗೆ ಪೋಸ್ಟ್ ಮಾಡಿರುವ ಈ ಫೋಟೋ ಸದ್ಯ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ.
ಈ ಫೋಟೋಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ಸೋ ಕ್ಯೂಟ್ ಅರ್ಹಾ ಎಂದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸೂಪರ್ ಜೋಡಿ ಎಂದು ದಂಪತಿಯನ್ನು ಹೊಗಳಿದ್ದಾರೆ. ಅಭಿಮಾನಿಗಳು ಅಷ್ಟೆ ಅಲ್ಲ ನಟಿಯರಾದ ಸಮಂತಾ ಮತ್ತು ರಾಕುಲ್ ಪ್ರೀತ್ಸಿಂಗ್ ಕೂಡ್ ಲವ್ ಸಿಂಬಲ್ ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)