ಹೈದರಾಬಾದ್: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇಂದು(ಏಪ್ರಿಲ್ 8) 43ನೇ ವಸಂತಕ್ಕೆ( Allu Arjun Birthday) ಕಾಲಿಟಿದ್ದಾರೆ. ಅವರ ಈ ವಿಶೇಷ ದಿನದಂದು ನಟನನ್ನು ನೋಡಲು ಮತ್ತು ಅವರಿಗೆ ಶುಭಹಾರೈಸಲು ಅಭಿಮಾನಿಗಳ ದಂಡೇ ಅವರ ಮನೆಯ ಹೊರಗೆ ಜಮಾಯಿಸಿತ್ತು. ಫ್ಯಾನ್ಸ್ ಪ್ರೀತಿಗೆ ಮನಸೋತು ಅಲ್ಲು ಅರ್ಜುನ್ ಹಲವರಿಗೆ ಹೈಫೈವ್ ನೀಡಿ ಖುಷಿ ಪಡಿಸಿದ್ದಾರೆ.
ಪ್ರತಿ ವರ್ಷ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಅವರ ಮನೆಯ ಹೊರಗೆ ಕಾಯುತ್ತಾರೆ. ಈ ವರ್ಷವೂ ಸಹ ಫ್ಯಾನ್ಸ್ ಆಸೆಯನ್ನು ನಟ ಅಲ್ಲು ಅರ್ಜುನ್ ನಿರಾಶೆಗೊಳ್ಳಲಿಲ್ಲ. ನಟನನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳನ್ನು ಭೇಟಿ ಮಾಡಲು ಕೆಲವು ನಿಮಿಷಗಳ ಕಾಲ ಮನೆಯಿಂದ ಹೊರಬಂದು ಅಲ್ಲು ಅರ್ಜುನ್ ಅಭಿಮಾನಿಗಳ ಪ್ರೀತಿ ಮತ್ತು ಶುಭಾಶಯಗಳಿಗೆ ಕೈಮುಗಿದು ಧನ್ಯವಾದ ಹೇಳಿದರು. ಕೆಲವು ಉತ್ಸಾಹಿ ಅಭಿಮಾನಿಗಳಿಗೆ ಅವರು ಹೈ-ಫೈವ್ ಕೂಡ ನೀಡಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಿರ್ದೇಶಕ ಅಟ್ಲೀ ಅವರ ಮುಂಬರುವ ಚಿತ್ರದ ಬಗ್ಗೆ ವಿಶೇಷ ಘೋಷಣೆಯನ್ನು ಮಾಡುವ ಮೂಲಕ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾದಲ್ಲಿ ತಮಿಳು ಸ್ಟಾರ್ ನಿರ್ದೇಶಕ ಅಟ್ಲೀ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕೃತ ಘೋಷಣೆ ಮಾಡಲಾಗಿದೆ. ಸದ್ಯ ಸಿನಿಮಾಕ್ಕೆ AA22 x A6 ಎಂದು ಶೀರ್ಷಿಕೆ ಇಡಲಾಗಿದೆ. ಅಲ್ಲು ಅರ್ಜುನ್ ಕೊನೆಯ ಬಾರಿಗೆ ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಚಿತ್ರದಲ್ಲಿ ಕಾಣಿಸಿಕೊಂಡರು.(ಏಜೆನ್ಸೀಸ್)