ನ್ಯೂಸ್

'ವೀರರ ನಡುವೆ ಯಾವುದೇ ಯುದ್ಧಗಳಿಲ್ಲ': ಪವನ್ ಹುಟ್ಟಿದ ದಿನಕ್ಕೆ ಬನ್ನಿ ಸ್ಪೆಷಲ್ ಪೋಸ್ಟ್!

Webdesk - Narayanaswamy

ಹೈದರಾಬಾದ್​: ಆಂಧ್ರ ಮತ್ತು ತೆಲಂಗಾಣದಲ್ಲಿ ಸಿನಿಕ್ರೇಜ್​ ಹೆಚ್ಚು ಎಂಬುದು ತಿಳಿದ ಸಂಗತಿಯೇ. ಸ್ಟಾರ್​ ಹೀರೋಗಳ ಹುಟ್ಟಿದ ದಿನ ಬಂದರೆ ಹಬ್ಬದ ವಾತಾವರಣವಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಂತಹ ಸಂಭ್ರಮ ಸೋಮವಾರ(ಸೆ.2) ಪವರ್ ಸ್ಟಾರ್ ಪವನ್​ ಕಲ್ಯಾಣ್​ ಗೆ ಒದಗಿ ಬಂದಿದೆ. ವಿಶೇಷವೇನೆಂದರೆ ಹಾವು-ಮುಂಗಸಿಯಂತಿದ್ದ ಪವನ್​ - ಅಲ್ಲು ಅರ್ಜುನ್ ಈ ವಿಶೇಷ ದಿನದೊಂದಿಗೆ ಒಂದಾಗುತ್ತಾರಾ ಎಂಬಂತಹ ಘಟನೆಯೊಂದು ನಡೆದಿದೆ. ಅಲ್ಲು ಅರ್ಜುನ್​(ಬನ್ನಿ) ಪವನ್ ಗಾಗಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ.

ಪವನ್ ಕಲ್ಯಾಣ್ ಹುಟ್ಟುಹಬ್ಬವನ್ನು ಅಭಿಮಾನಿಗಳು ತುಂಬಾ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಚಲನಚಿತ್ರ ಗಣ್ಯರಿಂದಲೂ ಶುಭಾಶಯ ಹರಿದು ಬರುತ್ತಿವೆ. ಈ ಸಂಭ್ರಮಕ್ಕೆ ಬನ್ನಿ ಈ ರೀತಿ ದನಿಗೂಡಿಸಿದ್ದಾರೆ. 'ಅಭಿಮಾನಿಗಳ ನಡುವೆ ಯುದ್ಧಗಳಿವೆ, ಆದರೆ ವೀರರ ನಡುವೆ ಯಾವುದೇ ಯುದ್ಧಗಳಿಲ್ಲ. ಪವರ್ ಸ್ಟಾರ್ ಮತ್ತು ಉಪ ಮುಖ್ಯಮಂತ್ರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಸ್ತುತ ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ನಡುವೆ ಹಂಚಿಕೊಳ್ಳಲಾಗುತ್ತಿದ್ದು, ವೈರಲ್​ ಆಗಿದೆ.

ಮತ್ತೊಂದೆಡೆ ಪವನ್ ಹುಟ್ಟುಹಬ್ಬಕ್ಕೆ ಗಬ್ಬರ್ ಸಿಂಗ್ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರೊಂದಿಗೆ ಪವನ್ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ ಬರುತ್ತದೆಯೇ ಎಂದು ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.