ಪ್ರವಾಸಿ ಕಾರಿನ ಚಾಲಕರ ಸಂಘದ ಪದಾಧಿಕಾರಿಗಳು ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು. ಎನ್.ರಾಘವೇಂದ್ರ, ಬಿ.ಡಿ.ಗಣೇಶ್, ಎಸ್.ಜಿ.ನರಸಿಂಹಮೂರ್ತಿ, ಕೇಶವಮೂರ್ತಿ ಇತರರಿದ್ದರು.  
ನ್ಯೂಸ್

ಟ್ಯಾಕ್ಸಿ ಸೇವೆ ಸೌಲಭ್ಯ ಕಲ್ಪಿಸಲು ಅವಕಾಶ ಕೊಡಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಮುಂದಿನ ದಿನಗಳಲ್ಲಿ ಶಿವಮೊಗ್ಗ ಏರ್‌ಪೋರ್ಟ್‌ನಿಂದ ವಿಮಾನಯಾನ ಆರಂಭವಾಗಲಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಏರ್‌ಪೋರ್ಟ್‌ನಿಂದ ಟ್ಯಾಕ್ಸಿ ಸೌಲಭ್ಯ ಒದಗಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಪ್ರವಾಸಿ ಕಾರಿನ ಚಾಲಕರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

ನಮ್ಮ ಸಂಘದಲ್ಲಿ ಸದಸ್ಯರಾಗಿರುವವರು ಉತ್ತಮವಾದ ಸೇವೆ ನೀಡುತ್ತಿದ್ದಾರೆ. ನಮ್ಮಲ್ಲಿ 400ಕ್ಕೂ ಹೆಚ್ಚು ಗುಣಮಟ್ಟದ ವಾಹನಗಳಿವೆ. ಅಂತಾರಾಷ್ಟ್ರೀಯ ಗುಣಮಟ್ಟದ ಏರ್‌ಪೋರ್ಟ್‌ಗೆ ಪೂರಕವಾಗಿ ನಾವು ಟ್ಯಾಕ್ಸಿ ಸೇವೆ ಒದಗಿಸಲು ಸಮರ್ಥರಿದ್ದೇವೆ. ಹಲವು ವರ್ಷಗಳಿಂದ ಶಿವಮೊಗ್ಗಕ್ಕೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ವಾಹನಗಳನ್ನು ಒದಗಿಸಿದ ಅನುಭವವೂ ಇದೆ. ಹೀಗಾಗಿ ನಮ್ಮ ಸಂಘಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದರು. ಪ್ರವಾಸಿ ಕಾರಿನ ಚಾಲಕರ ಸಂಘದ ಅಧ್ಯಕ್ಷ ಬಿ.ಡಿ.ಗಣೇಶ್, ಕಾರ್ಯದರ್ಶಿ ಎನ್.ರಾಘವೇಂದ್ರ, ಎಸ್.ಜಿ.ನರಸಿಂಹಮೂರ್ತಿ, ರವಿ, ಕೇಶವಮೂರ್ತಿ ಇತರರಿದ್ದರು.