ರಿಪ್ಪನ್‌ಪೇಟೆ ಸಮೀಪದ ಮಚಲಿಜೆಡ್ಡು ಗ್ರಾಮದಲ್ಲಿ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಆಲುವಳ್ಳಿ ವೀರೇಶ, ಎನ್.ಸತೀಶ, ಎ.ಟಿ.ನಾಗರತ್ನಾ ಇತರರಿದ್ದರು. 
ನ್ಯೂಸ್

ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಿ

ಸೋಮಶೇಖರ ಎನ್

ರಿಪ್ಪನ್‌ಪೇಟೆ: ಅರಸಾಳು ಗ್ರಾಪಂ ವ್ಯಾಪ್ತಿಯ ಮಚಲಿಜೆಡ್ಡು ಗ್ರಾಮದಲ್ಲಿ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ಮಳೆಯಿಂದ ಬಸವಾಪುರ ಭಾಗದ ರೈತರಿಗೆ ಬೆಳೆ ನಷ್ಟವಾಗಿದೆ. ಮಚಲಿಜೆಡ್ಡು ಸೇತುವೆ ಪಕ್ಕ ನಿರ್ಮಿಸಿದ್ದ ವಾಲ್ ಬಿದ್ದು ಸಂಪರ್ಕ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿದೆ. ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಸಂಬಂಧಪಟ್ಟ ಇಲಾಖೆ ಗಮನಹರಿಸಿ ರಸ್ತೆ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಸೇತುವೆ ಅಕ್ಕಪಕ್ಕ ವ್ಯವಸ್ಥಿತ ಕಾಮಗಾರಿ ಕೈಗೊಳ್ಳಲು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಗಮನಕ್ಕೆ ತರಲಾಗುವುದು ಎಂದರು.

ಮುಖಂಡರಾದ ಆಲುವಳ್ಳಿ ವೀರೇಶ, ಎನ್.ಸತೀಶ, ಎ.ಟಿ.ನಾಗರತ್ನಾ, ಉಮೇಶ, ಪಿ.ರಮೇಶ, ಅರುಣ್‌ಕುಮಾರ್, ರಾಜೇಶ್ ಇತರರಿದ್ದರು.