ಸಾಂದರ್ಭಿಕ ದೃಷ್ಯ 
ನ್ಯೂಸ್

ಸಾಕು ನಾಯಿಯನ್ನು ಕಾಪಾಡಲು ಮೊಸಳೆಗೆ ಪಂಚ್​ ಕೊಟ್ಟ ಭೂಪ!

ಆಸ್ಟ್ರೇಲಿಯಾ: ತನ್ನ ಮುದ್ದಿನ ನಾಯಿಯನ್ನು ಕಿತ್ತುಕೊಳ್ಳುವುದನ್ನು ತಡೆಯಲು ಯತ್ನಿಸಿದ ವ್ಯಕ್ತಿಯೊಬ್ಬ ಮೊಸಳೆಗೆ ಗುದ್ದುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ .

37 ವರ್ಷದ ಅಲಿಸ್ಟರ್ ಮ್ಯಾಕ್‌ಫೀ, ಆಸ್ಟ್ರೇಲಿಯಾದ ಪೋರ್ಟ್ ಡೌಗ್ಲಾಸ್‌ನ ಉತ್ತರದಲ್ಲಿರುವ ಬ್ಲೂಮ್‌ಫೀಲ್ಡ್ ಬೋಟ್ ರಾಂಪ್‌ನಲ್ಲಿ ನೀರಿನಲ್ಲಿ ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ. ಈ ಸಂದರ್ಭ ಬಂದು ನಾಯಿಯ ಮೇಲೆ ದಾಳಿ ಮಾಡಿದ ಮೊಸಳೆಗೆ ಪಂಚ್​ ಮಾಡಿದ್ದಾನೆ. ಒಟ್ಟಾರೆ ಪ್ರಹಸನದಲ್ಲಿ ಮೊಸಳೆ ಈತನ ಕಾಲನ್ನು ತನ್ನ ದವಡೆಗಳಲ್ಲಿ ಹಿಡಿದುಕೊಂಡು ಅವನನ್ನು ನೀರಿಗೆ ಎಳೆದಿದೆ.

ಮ್ಯಾಕ್‌ಫೀ ಮೊಸಳೆಯ ಹಿಡಿತದಿಂದ ಪಾರಾಗುವಲ್ಲಿ ಯಶಸ್ವಿಯಾದರೂ ಅವರ ಸಾಕು ನಾಯಿಯನ್ನು ಮೊಸಳೆಯು ಎಳೆದುಕೊಂಡು ಹೋಗಿದೆ.

ನಾಯಿಯನ್ನು ಬಿಡಿಸುವ ಪ್ರಯತ್ನದಲ್ಲಿ, ವ್ಯಕ್ತಿ ಹತಾಶರಾಗಿದ್ದು ಮೊಸಳೆಗೆ ಪಂಚ್​ ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಮೊಸಳೆಯ ಭೀಕರ ದಾಳಿಯಲ್ಲಿ ಅವರ ಕಾಲಿಗೆ ತೀವ್ರ ಗಾಯಗಳಾಗಿವೆ.

ಇದನ್ನೂ ಓದಿ: ಭಾರಿ ಗಾತ್ರದ ಮೊಸಳೆ ಸೆರೆ
ಮ್ಯಾಕ್‌ಫೀಯನ್ನು ಆಸ್ಪತ್ರೆಗೆ ದಾಖಲಿಸಲಾಗಿಉದ್ದು ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಲಾಗಿದೆ. ಈ ಆಘಾತಕಾರಿ ಘಟನೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಅವರು ನಿರಾಕರಿಸಿದ್ದಾರೆ.

ಈತ ತನ್ನ ನಾಯಿಯನ್ನು ಉಳಿಸುವ ಸಲುವಾಗಿ ಮೊಸಳೆಯ ಹಿಂಭಾಗಕ್ಕೆ ಗುದ್ದುತ್ತಿದ್ದ. ಆದರೆ ಮೊಸಳೆಯ ಗಾತ್ರ ದೊಡ್ಡದಾಗಿದ್ದು ಅದು ಬಲಶಾಲಿಯಾಗಿತ್ತು. ಈ ಕಾರಣದಿಂದಾಗಿ ತನ್ನ ನಾಯಿಯನ್ನು ಉಳಿಸಲು ಆತನಿಂದ ಸಾಧ್ಯವಾಗಲಿಲ್ಲ. (ಏಜೆನ್ಸೀಸ್​)