ಕೋಲಾರ ಎಪಿಎಂಸಿ  
ನ್ಯೂಸ್

ತರಕಾರಿ ದಲ್ಲಾಳಿಗಳ ಆರೋಪ ಸತ್ಯಕ್ಕೆ ದೂರ

ಕೋಲಾರ: ಎಪಿಎಂಸಿಯಲ್ಲಿ ಹಲವಾರು ಸುಧಾರಣ ಕ್ರಮ ಕೈಗೊಂಡು ವ್ಯವಸ್ಥೆ ಸರಿಪಡಿಸಲಾಗುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದ ಕೆಲ ತರಕಾರಿ ದಲ್ಲಾಳಿಗಳು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ.

ನಗರದ ಎಪಿಎಂಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರಕಾರಿ ಮಂಡಿ ಮಾಲೀಕರು ಸಂಘ ಕಟ್ಟಿಕೊಂಡು ಕೆಲಸ ಮಾಡಲು ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದರು.
ರೈತರಿಗೆ ಬಿಳಿ ಚೀಟಿ ನೀಡದೆ ಅಧಿಕೃತ ಲೆಕ್ಕ ತೀರುವಳಿ ಪಟ್ಟಿ ನೀಡುವುದು, ರೈತರು ತರುವ ೧೦೦ ಕೆಜಿಗೆ 5 ರಿಂದ 10 ಕೆಜಿ ಲೆಸ್ ಎಂದು ತೋರಿಸಿ ಪಾವತಿಸಬೇಕಾದ ಮೊತ್ತವನ್ನು ಮುರಿದುಕೊಳ್ಳುತ್ತಾರೆ. ಇದಕ್ಕೆ ಕಡಿವಾಣ ಹಾಕಿ ನಿಗದಿತ ಸಮಯದಲ್ಲಿ ತರಕಾರಿ ಹರಾಜನ್ನು ವರ್ತಕರ ಮೂಲಕ ನಡೆಸಬೇಕು. ತರಕಾರಿ ಬೇಗನೆ ಹಾಳಾಗುವ ಪದಾರ್ಥವಾಗಿರುವುದರಿಂದ ಶನಿವಾರ ರಜೆ ಹಾಕಬಾರದು ಎಂದು ಕ್ರಮಕೈಗೊಂಡ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ದ್ವೇಷ ಸಾಽಸುತ್ತಿದ್ದಾರೆ ಎಂದರು.
ರೈತರಿಗೆ, ಸಮಿತಿಗೆ ನೆಫ್ಟ್, ಆರ್‌ಟಿಜಿಎಸ್ ಹಾಗೂ ಚೆಕ್ ಮೂಲಕ ಹಣ ಪಾವತಿಸಲು ಸೂಚಿಸಲಾಗಿತ್ತು. ಆದರೆ ಕೆಲವೊಂದು ಮಂಡಿ ಮಾಲೀಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಿತಿಗೆ ಲೆಕ್ಕ ಪತ್ರಗಳನ್ನು ಸಲ್ಲಿಸದ ಮಾಲೀಕರಿಗೆ ನೋಟಿಸ್ ನೀಡಿದ್ದರಿಂದ ಕೆಲವರು ಕಚೇರಿಗೆ ಬಂದು ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸಮಿತಿಯ ಆಡಳಿತಾಽಕಾರಿ ಹಾಗೂ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಜೆಎನ್‌ಜಿ ತರಕಾರಿ ದಲ್ಲಾಳರ ಸಂಘವನ್ನು ಅನಽಕೃತವಾಗಿ ರಚನೆ ಮಾಡಿಕೊಂಡು, ಹೊಸದಾಗಿ ಲೈಸನ್ಸ್ ಪಡೆದುಕೊಳ್ಳಲು ಬರುವವರ ಬಳಿ ಹಣ ಪಡೆದು ವಹಿವಾಟು ನಡೆಸಲು ಅವಕಾಶ ನೀಡುತ್ತಾರೆ. ಲೈಸನ್ಸ್ ಕೊಡಿಸಲು ಸಂಘದ ಅಧ್ಯಕ್ಷ ಅರ್ಜಿದಾರನಿಂದ ಹಣ ವಸೂಲಿ ಮಾಡಿರುವುದು ಸಾಬೀತಾಗಿದೆ. ಹೀಗೆ ಹಲವು ವಿಚಾರಗಳು ಬೆಳಕಿಗೆ ಬಂದಿರುವ ಕಾರಣ ಜಿದ್ದು ಸಾಽಸುತ್ತಿದ್ದಾರೆ ಎಂದರು.
ಶೌಕತ್ ಎಂಬುವರ ಮಳಿಗೆಗೆ ಜಿಬಿಆರ್ ಮಂಡಿ ಮಾಲೀಕರಾದ ಸತೀಶ್, ಪುಟ್ಟರಾಜು ಅತಿಕ್ರಮ ಪ್ರವೇಶಿಸಿ ವಾರಸುದಾರನನ್ನು ವಂಚಿಸಿದ್ದಾರೆ. ಸತೀಶ್ ಸುಮಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಸೆಸ್ ಮೊತ್ತವನ್ನು ಪಾವತಿ ಮಾಡಲು ನೋಟಿಸ್ ನೀಡಿದ್ದಕ್ಕೆ ಇಲ್ಲ ಸಲ್ಲದ ಕಥೆಕಟ್ಟಿ ನನ್ನ ಸ್ಥಾನಕ್ಕೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಹೇಳಿದರು.