RSS: ಕೇರಳ ಮೂಲದ ಯುವ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ ಪ್ರಕರಣದ ನಂತರ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ಸಮಗ್ರ ತನಿಖೆಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ (ಆಕ್ಟೋಬರ್,13) ಕರೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರು ಕಾಂಗ್ರೆಸ್ ಸಂಸದೆ, ಆತ್ಮಹತ್ಯೆ ಸಂದೇಶವನ್ನು ಉಲ್ಲೇಖಿಸಿ, ಬಲಿಪಶುವನ್ನು RSSನ ಹಲವಾರು ಸದಸ್ಯರನ್ನು ನಿಂದಿಸಿದ್ದಾರೆ ಮತ್ತು ಆರ್‌ಎಸ್‌ಎಸ್ ನಾಯಕತ್ವವು ಈ ಆರೋಪಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಮುಂದುವರೆದು ಮಾತನಅಡಿದ ಪ್ರಿಯಾಂಕಾ, ಈ ಆರೋಪಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲು RSS ಅವಕಾಶ ನೀಡಬೇಕು. ಅಲ್ಲದೆ, ಆನಂದು ಅಜಿ ತಮ್ಮ ಆತ್ಮಹತ್ಯೆ ಸಂದೇಶದಲ್ಲಿ ಆರ್‌ಎಸ್‌ಎಸ್‌ನ ಹಲವಾರು ಸದಸ್ಯರಿಂದ ಪದೇಪದೆ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. ತಾವು ಬಲಿಪಶು ಮಾತ್ರವಲ್ಲ, ಆರ್‌ಎಸ್‌ಎಸ್ ಶಿಬಿರಗಳಲ್ಲಿ ವ್ಯಾಪಕ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಅಜಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಯ ಮತಗಳ್ಳತನ ಆರೋಪ: ಎಸ್ಐಟಿ ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್| Supreme Court
ಅಲ್ಲದೆ, ಇದು ನಿಜವಾಗಿದ್ದರೆ, ಇದು ಭಯಾನಕವಾಗಿದೆ. ಭಾರತದಾದ್ಯಂತ ಲಕ್ಷಾಂತರ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರು ಈ ಶಿಬಿರಗಳಿಗೆ ಹಾಜರಾಗುತ್ತಾರೆ. RSS ನಾಯಕತ್ವವು ತಕ್ಷಣ ಕ್ರಮ ಕೈಗೊಳ್ಳಬೇಕು. RSS ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಹುಡುಗರ ಮೇಲಿನ ಲೈಂಗಿಕ ದೌರ್ಜನ್ಯವು ಹುಡುಗಿಯರಂತೆಯೇ ವ್ಯಾಪಕವಾದ ಪಿಡುಗಾಗಿದೆ. ಈ ಅವಾಚ್ಯ ಘೋರ ಅಪರಾಧಗಳ ಸುತ್ತಲಿನ ಮೌನ ಸಂಹಿತೆಯನ್ನು ಮುರಿಯಬೇಕು ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.
ಈ ಪ್ರಕರಣದ ಬಗ್ಗೆ ಎಕ್ಸ್ನಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ, ಅಪರಾಧಿಗಳನ್ನು ಗುರುತಿಸಿ ಮತ್ತು ಅವರನ್ನು ಹೊಣೆಗಾರರನ್ನಾಗಿ ಮಾಡಲು ಕಾಲಮಿತಿಯ ಮತ್ತು ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಕ್ರಮ ಕೈಗೊಳ್ಳಲು ವಿಫಲವಾದರೆ ಭಾರತದ ಯುವಜನರಿಗೆ ಹಾನಿ ಮಾಡುವವರಿಗೆ ಧೈರ್ಯ ತುಂಬುತ್ತದೆ ಎಂದು ಎಚ್ಚರಿಸಿದರು. (ಏಜೆನ್ಸೀಸ್)