ನ್ಯೂಸ್

ಸರ್ವರ ಒಳಿತು

ಬಾಬುಪ್ರಸಾದ್​ ಮೋಡಿಸ್​
ಪ್ರವಾದಿ(ಸ) ಮಹಮ್ಮದ್ ಸಾಮೂಹಿಕ ಚಾರಿತ್ರ್ಯದ ಬಗ್ಗೆ ಕೆಲವು ವಿವರಣೆಗಳನ್ನು ನೀಡಿದ್ದಾರೆ ಎಂದು ಅಬೂ ಹುರೈರಾ(ರ) ಪ್ರಸ್ತಾಪಿಸು ತ್ತಾರೆ. ಮಾನವ ಅಪನಂಬಿಕೆಗಳಿಂದ ದೂರವಿರುವುದು ಒಳ್ಳೆಯದು.

ಏಕೆಂದರೆ ಕೆಟ್ಟ ದೃಷ್ಟಿಯಿಂದ ಇನ್ನೊಬ್ಬರ ತನಿಖೆ ನಡೆಯ ಬಾರದು, ಕುಂದು ಕೊರತೆ, ಲೋಪದೋಷಗಳ ಹುಡುಕಾಟದಲ್ಲಿ ಇರಬಾರದು. ಗ್ರಾಹಕರನ್ನು ಸಿಲುಕಿಸಲು ದಲ್ಲಾಳಿ ಕಾರ್ಯ ಮಾಡಬಾರದು. ಮಾನ ವರು ಪರಸ್ಪರ ದ್ವೇಷಿಸಬಾರದು. ಒಬ್ಬ ಮತ್ತೊಬ್ಬನ ತೇಜೋವಧೆ ಮಾಡ ಬಾರದು. ಅಲ್ಲಾಹನ ದಾಸರಾದ ನೀವು ಸಹೋದರರಾಗಿ ಬದುಕಬೇಕು.

ಮಾನವರು ಸಹೋದರರಾಗಿ ಬದುಕಲು ಏನು ಮಾಡಬೇಕು? ಮುಸ್ಲಿಮರಿಗೆ ಇತರ ಮುಸ್ಲಿಮರ ಮೇಲೆ ಜವಾಬ್ದಾರಿಯುತ ಆರು ಹಕ್ಕುಗಳಿವೆ. 1) ಒಬ್ಬ ಮುಸ್ಲಿಂ ಮತ್ತೊಬ್ಬ ಮುಸ್ಲಿಮನನ್ನು ಭೇಟಿಯಾದರೆ ಆತನಿಗೆ ಸಲಾಂ ಹೇಳುವುದು. 2) ಆತ ಆಮಂತ್ರಣ ನೀಡಿದರೆ ಅದನ್ನು ಸ್ವೀಕರಿಸುವುದು. 3) ಆತ ನಿನ್ನ ಹಿತ ಚಿಂತನೆಯನ್ನು ಬಯಸಿದರೆ ಅವನಿಗೂ ಬಯಸುವುದು. 4)ಆತ ಸೀನಿದಾಗ ಅಲ್​ಹಮ್ಮುಲಿಲ್ಲಾಹ್ ಇಲ್ಲ ಎಂದು ಹೇಳಿದರೆ ಉತ್ತರ ನೀಡುವುದು. 5)ಅವನು ಅನಾ ರೋಗ್ಯದಿಂದ ಇದ್ದಾಗ ಸಂದರ್ಶನ ಮಾಡಿಕೊಂಡು ಬರುವುದು. 6) ಆತ ಮರಣ ಹೊಂದಿದರೆ ಆತನ ಜನಾಝಾ ನಮಾಜಿನ ಮೂಲಕ ಕಬರ್​ಸ್ಥಾನಕ್ಕೆ ಹೋಗಿ ಬರುವುದು. ಸಲಾಂ ಹೇಳುವುದು ಎಂದರೆ ಕೇವಲ ಬಾಯಿಯಿಂದ ‘ಅಸ್ಸಲಾಮು ಅಲೈಕುಂ’ ಎಂದು ಹೇಳುವುದಲ್ಲ. ಬದಲಾಗಿ ಅದೊಂದು ಪ್ರಮಾಣವಾಗಿದೆ.

ನನ್ನಿಂದ ನಿನ್ನ ಪ್ರಾಣ, ಆಸ್ತಿ ಮತ್ತು ಮಾನ-ಮರ್ಯಾದೆ ಎಲ್ಲವೂ ಸುರಕ್ಷಿತವಾಗಿವೆ. ಅವಕ್ಕೆ ನನ್ನಿಂದ ಯಾವ ಅಪಾಯವೂ ಇರುವುದಿಲ್ಲ ಎಂಬ ಪ್ರಮಾಣ. ಹಾಗೆಯೇ ಅದೊಂದು ಪ್ರಾರ್ಥನೆಯಾಗಿದೆ. ಅಲ್ಲಾಹನು ನಿನ್ನ ಧರ್ಮವನ್ನೂ, ವಿಶ್ವಾಸವನ್ನೂ ಸರ್ವ ಬಗೆಯ ವಿಪತ್ತುಗಳಿಂದ ರಕ್ಷಿಸಲಿ ಹಾಗೂ ನನ್ನ ಮೇಲೆ ಅವನು ಕರುಣೆಯ ಸುರಿಮಳೆಗೈಯ್ಯಲಿ ಎಂಬ ಪ್ರಾರ್ಥನೆ. ‘ಅಸ್ಸಲಾಮು ಅಲೈಕುಂ’ ಎಂಬ ಪದಗಳಿರುವ ಈ ಸ್ಪೂರ್ತಿಯು ಈಗ ಇಲ್ಲವಾಗಿ, ಕೆಲವು ಶಬ್ದಗಳು ಮಾತ್ರ ಉಳಿದಿವೆ. ಪ್ರತಿಯೊಂದು ಜೀವಿಗೂ ದಯೆ ತೋರಿದರೆ ಪುಣ್ಯ ಲಭಿಸುವುದು ಎಂಬ ಮಾತು ಗಮನಾರ್ಹ.