ನವದೆಹಲಿ: ಪ್ರತಿ ರಾಜ್ಯದಲ್ಲೂ ಯೂನಿಟಿ ಮಾಲ್ ಸ್ಥಾಪನೆ ಮಾಡಿ, ಅದರ ಮೂಲಕ ದೇಶೀಯ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿ ಮಾತನಾಡಿರುವ ವಿತ್ತ ಸಚಿವ ನಿಮರ್ಲಾ ಸೀತಾರಾಮನ್, 'ಪ್ರತೀ ರಾಜ್ಯದ ರಾಜಧಾನಿಯಲ್ಲೂ ಯೂನಿಟಿ ಮಾಲ್ ಹೆಸರಿನ ಒಂದೊಂದು ಮಾಲ್ ಸ್ಥಾಪಿಸಿ, ಅದರ ಮೂಲಕ ಪ್ರಾದೇಶಿಕ ಉತ್ಪನ್ನಗಳು (ಜಿಯಾಗ್ರಫಿಕಲ್ ಇಂಡಿಕೇಶನ್) ಮತ್ತು ಕರಕುಶಲ ವಸ್ತುಗಳನ್ನು ಅಲ್ಲಿ ಮಾರಾಟ ಮಾಡುವುದಕ್ಕೆ ಉತ್ತೇಜಿಸಲಾಗುತ್ತದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏಕಲವ್ಯ ಮಾದರಿ ಶಾಲೆಗಳ ನಿರ್ಮಾಣ; 38,800 ಶಿಕ್ಷಕರ ನೇಮಕ
ಈ ಮಾಲ್ಗಳಲ್ಲಿ ಆಯಾ ರಾಜ್ಯದ ವಿಭಿನ್ನ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದ. ಉದಾಹರಣೆಗೆ, ಬೆಂಗಳೂರಿನಲ್ಲಿ ಯೂನಿಟಿ ಮಾಲ್ ಸ್ಥಾಪನೆಯಾದರೆ, ಅಲ್ಲಿ ಚೆನ್ನಪಟ್ಟಣದ ಗೊಂಬೆ, ಬ್ಯಾಡಗಿ ಮೆಣಸಿನಕಾಯಿ, ಇಳಕಲ್ ಸೀರೆ, ಮೈಸೂರು ರೇಷ್ಮೆ ಸೀರೆ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ.