ಅವರನ್ನು ಸದ್ಯಕ್ಕೆ ಜಗತ್ತಿನ ಒಡೆಯನಾದ ಅಲ್ಲಾಹನು ನಿಮ್ಮ ಅಧೀನಕ್ಕೆ ನೀಡಿರುವನು. ದೇವರು ಒಬ್ಬನ ನಿಯಂತ್ರಣಕ್ಕೆ ಸಹೋದರನನ್ನು ನೀಡಿದ್ದರೆ ಆತನು ತಾನು ಉಣ್ಣುವುದನ್ನೇ ಆ ಸಹೋದರನಿಗೆ ಉಣಿಸಬೇಕು. ತಾನು ಉಡುವುದನ್ನೇ ಆತನಿಗೆ ಉಡಿಸಬೇಕು. ಅವನಿಗೆ ಅಸಾಧ್ಯವಾದ ಯಾವುದೇ ಕಾರ್ಯವನ್ನು ಅವನಿಂದ ಮಾಡಿಸಬಾರದು.
ಯಾವತ್ತಾದರೂ ಒಂದು ಕ್ಲಿಷ್ಟವಾದ ಕಾರ್ಯವನ್ನು ಅವನಿಗೆ ವಹಿಸಿ ಕೊಡುವುದರಲ್ಲಿ ಆ ಕೆಲಸದಲ್ಲಿ ಆತನಿಗೆ ಸಹಾಯ ಮಾಡಬೇಕು. ನಿಮ್ಮಲ್ಲಿ ಒಬ್ಬ ಸೇವಕನು ಅಡುಗೆ ಮಾಡಿ, ಆಹಾರವನ್ನು ತಂದಾಗ, ಅಡುಗೆಯ ವೇಳೆ ಆತ ಸಹಿಸಿದ ಹಬೆಯ ಲಕ್ಷಣಗಳು ಆತನ ಮುಖದಲ್ಲಿ ಕಂಡು ಬಂದರೆ ಅವನು, ಆ ತನ್ನ ಸೇವಕನನ್ನು ತನ್ನ ಪಕ್ಕದಲ್ಲಿಯೇ ಕುಳ್ಳಿರಿಸಿ ಊಟ ಮಾಡಿಸಬೇಕು. ಊಟ ಕಡಿಮೆ ಇದ್ದರೆ ಒಂದೆರಡು ತುತ್ತನ್ನಾದರೂ ಆ ಸೇವಕನ ಕೈಯಲ್ಲಿ ಇಡಬೇಕು’.
ಅಬೂ ಉಮಾಮ್(ರ) ಪ್ರಕಾರ, ಒಂದು ಸಾರಿ ಪ್ರವಾದಿ ಒಬ್ಬ ಗುಲಾಮನನ್ನು ಅಲೀ ಅವರಿಗೆ ಉಡುಗೊರೆಯಾಗಿ ನೀಡುತ್ತ, ಈತನಿಗೆ ಹೊಡೆಯಬೇಡ. ಏಕೆಂದರೆ ನಮಾಜ್ ಮಾಡುವವರಿಗೆ ಹೊಡೆಯಬಾರದು ಎನ್ನುತ್ತಾರೆ. ಸೇವಕರೊಡನೆ ಯಜಮಾನ ನಡೆದುಕೊಳ್ಳಬೇಕಾದ ಬಗೆಯನ್ನು ಆ ಮೂಲಕ ಇಲ್ಲಿ ಪ್ರಸ್ತಾಪಿಸಲಾಗಿದೆ.ಅಬೂ ಸ ಈದ್ ಖದ್ರಿ ವಿವರಿಸಿದಂತೆ, ಒಂದು ದಿನ ಪ್ರಯಾಣದಲ್ಲಿದ್ದಾಗ ಒಬ್ಬ ವ್ಯಕ್ತಿ ಪ್ರವಾದಿ(ಸ) ಅವರ ಬಳಿಗೆ ಸವಾರಿಯಲ್ಲಿ ಆಗಮಿಸಿ, ಅತ್ತಿತ್ತ ಗಮನಿಸತೊಡಗಿದನು.
ಪ್ರವಾದಿ(ಸ), ಈ ವ್ಯಕ್ತಿ ಏನೋ ಅಗತ್ಯ ವಸ್ತುವಿಗಾಗಿ ನೋಡುತ್ತಿದ್ದಾನೆ ಎಂದು ಗ್ರಹಿಸಿದರು. ಯಾರ ಹತ್ತಿರ ಅಗತ್ಯಕ್ಕಿಂತ ಹೆಚ್ಚಿನ ಸವಾರಿ ಇದೆಯೋ ಅವರು ಸವಾರಿಗೆ ಜಾನುವಾರು ಇಲ್ಲದವರಿಗೆ ಅದನ್ನು ಕೊಡಬೇಕು ಎಂದು ಸೂಚಿಸಿದರು.