ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅವರಿಗೆ, ನಾವು ಶಾಶ್ವತವಲ್ಲ. ನಮಗೆ ಸಾವಿದೆ. ಜೀವನ ಎಂಬುದು ತುಂಬಾ ಚಿಕ್ಕದು ಎಂಬ ಅರಿವಾಯಿತಂತೆ. ಆಲಿಯಾ ಅವರ ಸಿನಿಮಾವೊಂದು ಪ್ಲಾಪ್ ಆದಾಗ ಆಲಿಯಾಗೆ ಈ ರೀತಿಯ ಚಿಂತನೆ ಬಂದಿತ್ತಂತೆ.
ಜೀವನ ಅಂದರೆ ಸಕ್ಸಸ್ ಎಂದುಕೊಂಡೆ. ಎಲ್ಲವೂ ನಾನು ಅಂದುಕೊಂಡಂತೆ ಆಗುತ್ತದೆ ಎಂಬ ಭ್ರಮೆಯಲ್ಲಿದ್ದೆ. ಜೀವನ ಪೂರ್ತಿ ಹೀಗೆ ಇರುತ್ತೆ ಎಂದುಕೊಂಡಿದ್ದೆ. ಆದರೆ ನನ್ನ ಸಿನಿಮಾವೊಂದು ಸೋಲು ಕಂಡಿತು. ಅಂದೇ ನನಗೆ ಜೀವನದ ನಿಜ ಅರ್ಥ ತಿಳಿದಿದ್ದು ಎಂದಿದ್ದಾರೆ. ಯಶಸ್ಸು ಯಾವತ್ತು ನಮ್ಮ ಜೊತೆಗೆ ಇರುವುದಿಲ್ಲ. ಜೀವನವೇ ಶಾಶ್ವತವಲ್ಲ. ನಾನು ಸಹ ಬದುಕಿರಲಾರೆ, ನನಗೂ ಸಾವಿದೆ ಎಂಬ ಅರಿವಾಯ್ತು ಎಂದು ಆಲಿಯಾ ಭಟ್ ಹೇಳಿದ್ದಾರೆ.
ಆಲಿಯಾ ಭಟ್ ಸ್ಟೂಡೆಂಟ್ ಆಫ್ ದಿ ಈಯರ್, ಟು ಸ್ಟೇಟ್ಸ್, ಬ್ರಹ್ಮಾಸ್ತ್ರ, ಹಾರ್ಟ್ ಆಫ್ ಸ್ಟೋನ್, ರಾಜಿ, ಗಂಗೂಬಾಯಿ ಕಥಿಯಾವಾಡಿ ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಫ್ಯಾನ್ಸ್ ಮನಸ್ಸಿಗೆ ಮತ್ತಷ್ಟು ಹತ್ತಿರವಾದವರು.
ಇದೀಗ ಆಲಿಯಾ ಹೇಳಿಕೆ ನೋಡುಗರನ್ನ ಶಾಕ್ಗೆ ತಳ್ಳಿದ್ದು, ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ ಸಾವಿನ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ ಕ್ಯೂಟ್ ನಟಿ ಆಲಿಯಾ ಭಟ್ ಹೇಳಿಕೆಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಸಿನಿರಂಗಕ್ಕೆ ಕಾಲಿಟ್ಟ ದಿನದಿಂದಲೂ ಆಲಿಯಾ ಭಟ್ ಅದ್ಭುತ ನಟನೆಯಿಂದ ಜನಮನ ಗೆದ್ದಿದ್ದರು.