Alia Bhatt Durga Puja: ಬಾಲಿವುಡ್ ನಟಿ ಆಲಿಯಾ ಭಟ್ ದುರ್ಗಾ ಪೂಜೆಗೆ ಬಂಗಾಳಿ ಶೈಲಿಯ ಸೀರೆ ಉಟ್ಟು ಮಿಂಚಿದ್ದಾರೆ. ಮುಂಬೈನ ನಾರ್ತ್ ಬಾಂಬೆ ಸರ್ಬಜನಿನ್ ದುರ್ಗಾ ಪೂಜಾ ಪೆಂಡಾಲ್ಗೆ ಭೇಟಿ ನೀಡಿದ ಅವರು, ಸಾಂಪ್ರದಾಯಿಕ ಲುಕ್ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ಇದೇ ಪೆಂಡಾಲ್ಗೆ ಬಂದಿದ್ದ ಪತಿ ರಣಬೀರ್ ಕಪೂರ್, ‘ಕಬೀರಾ’ ಹಾಡು ಹಾಡಿದ್ದು, ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಲಿಯಾ ಭಟ್ ಫ್ಯೂಷಿಯಾ ಪಿಂಕ್ ಬಣ್ಣದ ಸೀರೆಯನ್ನು ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಉಟ್ಟುಕೊಂಡಿದ್ದರು. ಇದಕ್ಕೆ ನೀಲಿ ಬಣ್ಣದ ಬ್ಲೌಸ್ ಧರಿಸಿ, ಕೂದಲನ್ನು ಅಚ್ಚುಕಟ್ಟಾಗಿ ಬನ್ ರೀತಿ ಕಟ್ಟಿಕೊಂಡು ಹೂಗಳಿಂದ ಅಲಂಕರಿಸಿದ್ದರು. ಅವರ ಈ ಹಬ್ಬದ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.
ನಿರ್ದೇಶಕ ಅಯಾನ್ ಮುಖರ್ಜಿ, ಆಲಿಯಾ ಭಟ್ ಅವರಿಗೆ ಪೆಂಡಾಲ್ನಲ್ಲಿ ದೇವಿಯ ದರ್ಶನ ಪಡೆಯಲು ಸಹಾಯ ಮಾಡಿದ್ದಾರೆ. ಆಲಿಯಾರನ್ನು ನೋಡಿದ ಅಭಿಮಾನಿಗಳು ಖುಷಿಯಾಗಿದ್ದು, ಅವರ ಜತೆ ಫೋಟೋ ಮತ್ತು ಸೆಲ್ಫಿ ತೆಗೆದುಕೊಂಡಿದ್ದಾರೆ. ಆಲಿಯಾ ಕೂಡ ಖುಷಿಯಿಂದಲೇ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ನಟ ರಣಬೀರ್ ಕಪೂರ್ ಕೂಡ ಇದೇ ದುರ್ಗಾ ಪೂಜಾ ಪೆಂಡಾಲ್ಗೆ ಭೇಟಿ ನೀಡಿದ್ದರು. ಕೆಂಪು ಮತ್ತು ಚಿನ್ನದ ಬಣ್ಣದ ಕುರ್ತಾ, ಬಿಳಿ ಪೈಜಾಮ ಧರಿಸಿದ್ದ ಅವರು ದುರ್ಗಾ ದೇವಿಯ ದರ್ಶನ ಪಡೆದು, ಫೋಟೋಗಳಿಗೆ ಪೋಸ್ ನೀಡಿದ್ದರು. ಬಳಿಕ ‘ಯೇ ಜವಾನಿ ಹೈ ದೀವಾನಿ’ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿಯವರ ಜೊತೆ ಸಮಯ ಕಳೆದಿದ್ದರು.
ಆದರೆ, ರಣಬೀರ್ ಗಮನ ಸೆಳೆದಿದ್ದು ಅವರ ಹಾಡಿನ ಕ್ಷಣ. ಗಾಯಕಿ ಹರ್ಷದೀಪ್ ಸಿಂಗ್ ವೇದಿಕೆಯಲ್ಲಿ ‘ಕಬೀರಾ’ ಹಾಡಲು ಶುರು ಮಾಡುತ್ತಿದ್ದಂತೆ, ರಣಬೀರ್ ಕೂಡ ಮೈಕ್ ಹಿಡಿದು ಅವರ ಜತೆ ಹಾಡಿದ್ದಾರೆ. ಅಷ್ಟೇ ಅಲ್ಲ, ಪ್ರೇಕ್ಷಕರ ಕಡೆಗೆ ಮೈಕ್ ತಿರುಗಿಸಿ ಅವರನ್ನೂ ಹಾಡಿನಲ್ಲಿ ಸೇರಿಕೊಳ್ಳುವಂತೆ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದುರ್ಗಾ ಪೂಜೆಯನ್ನು ದುರ್ಗೋತ್ಸವ ಅಥವಾ ಶಾರದೋತ್ಸವ ಎಂದೂ ಕರೆಯಲಾಗುತ್ತದೆ. ದುರ್ಗಾ ದೇವಿಯು ಮಹಿಷಾಸುರನನ್ನು ಸಂಹರಿಸಿದ ವಿಜಯವನ್ನು ಸ್ಮರಿಸುವ ಈ ಹಬ್ಬವನ್ನು ಭಕ್ತರು ಪ್ರತಿ ವರ್ಷ ಸಂಭ್ರಮದಿಂದ ಆಚರಿಸುತ್ತಾರೆ. ಹಬ್ಬದ ಕೊನೆಯ ದಿನವಾದ ವಿಜಯದಶಮಿಯಂದು ದುರ್ಗಾ ದೇವಿಯ ವಿಜಯವನ್ನು ಆಚರಿಸಲಾಗುತ್ತದೆ.