ಮುಂಬೈ: ಸೆಲೆಬ್ರಿಟಿಗಳ ಹಳೆಯ ಫೋಟೋಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವು ಫೋಟೋಗಳನ್ನು ನೋಡಿ ಅಭಿಮಾನಿಗಳು ಬೆರಗಾಗುತ್ತಾರೆ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಬಾಲ್ಯದ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿದ ನಂತರ ಅವರು ಯಾರೂ ಎಂದು ನೀವೂ ಗುರುತಿಸಲು ಸಾಧ್ಯವಿಲ್ಲ ಬಿಡಿ!
ಫೋಟೋದಲ್ಲಿ ಕಾಣುವ ಈ ಪುಟ್ಟ ಪಾಪು 9 ವರ್ಷಗಳ ಹಿಂದೆ ಚಿತ್ರ ಜಗತ್ತಿಗೆ ಕಾಲಿಟ್ಟರು. ಈಗ ಬಾಲಿವುಡ್‌ನಲ್ಲಿ ಇಂದು ಚಿರಪರಿಚಿತ ಹೆಸರು. ಅವರು ಈ ಉದ್ಯಮದ ಜನಪ್ರಿಯ ನಿರ್ದೇಶಕರ ಮಗಳು. ಇತ್ತೀಚೆಗಷ್ಟೇ ಈ ನಟಿ ನಿರ್ಮಾಪಕಿಯಾಗಿಯೂ ಪಯಣ ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಈ ನಟಿ ಕೆಲ ಸಮಯದ ಹಿಂದೆ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈ ನಟಿ ಯಾರು ಎಂದು ಹೇಳಿ ನೋಡೋಣ...
ಈ ಮುದ್ದಾದ ಪಾಪು ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಅಲು.. ಅಂದರೆ ಆಲಿಯಾ ಭಟ್. ಆಲಿಯಾಳನ್ನು ಆಕೆಯ ಕುಟುಂಬ ಮತ್ತು ಸ್ನೇಹಿತರು ಪ್ರೀತಿಯಿಂದ ಅಲು ಎಂದು ಕರೆಯುತ್ತಾರೆ. ಫ್ಯಾನ್ಸ್ ಪೇಜ್ನಿಂದ ಹಂಚಿಕೊಂಡ ಈ ವಿಡಿಯೋದಲ್ಲಿ, ಪುಟ್ಟ ಆಲಿಯಾ ತನ್ನ ತಂದೆ ಮಹೇಶ್ ಭಟ್ ಜೊತೆ ಆಟವಾಡುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಆಲಿಯಾ ಭಟ್ ಅವರ ತಾಯಿಯ ಜನ್ಮದಿನದಂದು ಶೂಟ್ ಮಾಡಿರುವುದೆಂದು ತೋರುತ್ತದೆ. ಏಕೆಂದರೆ ಮಹೇಶ್ ಭಟ್ ತಮ್ಮ ಪ್ರಿಯತಮೆಯ ಹುಟ್ಟುಹಬ್ಬದಂದು ಪ್ರೀತಿಯಿಂದ ಶುಭ ಹಾರೈಸುತ್ತಿರುವುದನ್ನು ಕಾಣಬಹುದು. ಆಲಿಯಾ ತನ್ನ ತಾಯಿಯನ್ನು ಮುದ್ದಾಗಿ ಕರೆಯುತ್ತಾರೆ. ಇದನ್ನು ನೋಡಿದರೆ ಖಂಡಿತವಾಗಿ ನಿಮ್ಮ ಹೃದಯ ಸೋಲಾದೆ ಇರಲಾರದು. ಅಮ್ಮನನ್ನು ಕರೆಯುತ್ತಾ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ ಆಲಿಯಾ. ಪಿಂಕ್ ಕಲರ್ ಫ್ರಾಕ್‌ನಲ್ಲಿರುವ ಆಲಿಯಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ತಮ್ಮ ಮ್ಯಾಜಿಕ್ ತೋರಿಸಿದ ನಂತರ, ಆಲಿಯಾ ಭಟ್ ಮುಂಬರುವ ಚಿತ್ರ ' ಜಿಗ್ರಾ ' ಗೆ ಸಜ್ಜಾಗಿದ್ದಾರೆ .
ಚಿತ್ರವು ಮುಂದಿನ ವರ್ಷ ಸೆಪ್ಟೆಂಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮೋಷನ್ ಪೋಸ್ಟರ್‌ನೊಂದಿಗೆ ನಟಿ ಹೊಸ ಚಿತ್ರವನ್ನು ಘೋಷಿಸಿದ್ದರು.