ನ್ಯೂಸ್

ಆಟೋದಲ್ಲಿ ಪ್ರಯಾಣ ಮಾಡಿದ Alia Bhatt ವಿಡಿಯೋ ವೈರಲ್​​

ಮುಂಬೈ: ಬಾಲಿವುಡ್​​ ನಟಿ ಆಲಿಯಾ ಭಟ್​​ ( Alia Bhatt) ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳು  ಇವೆ. ಆದರೂ ಸಹ ಅವರು ಆಟೋದಲ್ಲಿ ಪ್ರಯಾಣ ಮಾಡುವ ಮೂಲಕ ಸುದ್ದಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಲಿಯಾ ಭಟ್ ಆಟೋ ಪ್ರಯಾಣದ ವಿಡಿಯೋ ವೈರಲ್ ಆಗಿದೆ.

ಬಹುಬೇಡಿಕೆಯ ನಟಿಯಾಗಿ ಆಲಿಯಾ ಭಟ್ ಅವರು ಗುರುತಿಸಿಕೊಂಡಿದ್ದಾರೆ. ಅವರು ನಟಿಸಿದ ಅನೇಕ ಸಿನಿಮಾಗಳು ಸೂಪರ್​ ಹಿಟ್ ಆಗಿವೆ. ಸಖತ್ ಬೇಡಿಕೆ ಇರುವಾಗಲೇ ಅವರು ರಣಬೀರ್​ ಕಪೂರ್​ ಜೊತೆ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಈ ಜೋಡಿಗೆ ರಹಾ ಹೆಸರಿನ ಹೆಣ್ಣು ಮಗು ಇದೆ.

ನಟಿ ಇತ್ತೀಚೆಗೆ ಮುಂಬೈನ ವರ್ಸೋವಾ ಜೆಟ್ಟಿಯಲ್ಲಿ ದೋಣಿಯಿಂದ ಇಳಿದು ಆಟೋರಿಕ್ಷಾದಲ್ಲಿ ಕಾಣಿಸಿಕೊಂಡರು. ಪ್ರದೇಶದ ಜೆಟ್ಟಿಗಳವರೆಗೆ ಕಾರನ್ನು ತೆಗೆದುಕೊಂಡು ಹೋಗುವುದು ಕಷ್ಟ. ರಸ್ತೆ ಕಚ್ಚಾ ಮತ್ತು ಭಾರೀ ವಾಹನಗಳಿರುತ್ತವೆ. ಹೀಗಾಗಿ ನಟಿ ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ.

ಸೆಲೆಬ್ರಿಟಿಗಳು ಎಲ್ಲಿಯೋ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಆಲಿಯಾ ಭಟ್ ಅವರಿಗಾಗಿ ಆಟೋ ಕಾಯುತ್ತಿತ್ತು. ಅಲ್ಲಿಯ ತನಕ ಅವರು ನಡೆದು ಬಂದಿದ್ದಾರೆ.

ಸುಮಾರು 90 ನಿಮಿಷಗಳ ರೋಡ್ ರೈಡ್‌ಗೆ ಹೋಲಿಸಿದರೆ ಸಮಯ ಉಳಿತಾಯವಾಗುವುದರಿಂದ ಅನೇಕ ಸೆಲೆಬ್ರಿಟಿಗಳು ವೆರ್ಸೋವಾದಿಂದ ಮುಂಬೈನ ಮಾಧ್ ದ್ವೀಪ ಪ್ರದೇಶದ ಶೂಟಿಂಗ್ ಸ್ಪಾಟ್‌ಗಳಿಗೆ ಜೆಟ್ಟಿ ಸವಾರಿಗಳನ್ನು ಆರಿಸಿಕೊಳ್ಳುತ್ತಿದ್ದಾರೆ.

ಕನ್ನಡದ ಸೂಪರ್‌ಸ್ಟಾರ್ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರಂತಹ ಇತರ ನಟರು ಕೂಡ ಶೂಟಿಂಗ್ ಸ್ಪಾಟ್‌ಗಳನ್ನು ತಲುಪಲು ಜೆಟ್ಟಿಯನ್ನು ತೆಗೆದುಕೊಳ್ಳುತ್ತಿರುವ ವಿಡಿಯೋಗಳು ಇತ್ತೀಚೆಗೆ ವೈರಲ್​​ ಆಗಿದ್ದವು.