ಆಲ್ದೂರು ಸರ್ಕಾರಿ ಪ್ರೌಢಶಾಲಾ ಆಟದ ಮೈದಾನದ ಕಾಮಗಾರಿಯನ್ನು ತಾಪಂ ಎಡಿ ಪರಮೇಶ್ ಪರಿಶೀಲನೆ ನಡೆಸಿದರು. ಎ.ಯು.ಇಬ್ರಾಹಿಂ, ಅರೆನೂರು ಸುಪ್ರೀತ್ ಇತರರಿದ್ದರು. 
ನ್ಯೂಸ್

ಆಟದ ಮೈದಾನ ಕಾಮಗಾರಿ ಪರಿಶೀಲನೆ

ಜಿ. ಗಜೇಂದ್ರ

ಆಲ್ದೂರು: ಸರ್ಕಾರಿ ಪ್ರೌಢಶಾಲಾ ಆಟದ ಮೈದಾನದ ಕಾಮಗಾರಿ ಕಳಪೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅರೆನೂರು ಗ್ರಾಮದ ಸುಪ್ರೀತ್ ತಾಲೂಕು ಪಂಚಾಯತಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ತಾಪಂ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಪರಮೇಶ್ ಸ್ಥಳ ಪರಿಶೀಲನೆ ನಡೆಸಿದರು.
ಸರ್ಕಾರಿ ಪ್ರೌಢಶಾಲೆ ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಎನ್‌ಆರ್‌ಇಜಿ ಯೋಜನೆಯಲ್ಲಿ 2,79,852 ರೂ. ಬಿಡುಗಡೆಯಾಗಿದ್ದು ಯಂತ್ರೋಪಕರಣ ಬಳಸಿ ಕಾಮಗಾರಿ ಮಾಡಲಾಗಿದೆ ಹಾಗೂ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಆಲ್ದೂರು ಪಿಡಿಒ ಅವರ ವಿರುದ್ಧ ಸುಪ್ರೀತ್ ದೂರು ನೀಡಿದ್ದರು. ಆದ್ದರಿಂದ ತಾಪಂ ಎ.ಡಿ.ಪರಮೇಶ್ ಗ್ರಾಪಂಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. ಪಿಡಿಒ ಶಂಶುನ್ ನಹರ್ ಅವರಿಂದ ಮಾಹಿತಿ ಪಡೆದು ದಾಖಲೆಗಳನ್ನು ನೀಡುವಂತೆ ತಿಳಿಸಿ ಶಾಲೆಯ ಆಟದ ಮೈದಾನವನ್ನು ಪರಿಶೀಲನೆ ನಡೆಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎ.ಯು.ಇಬ್ರಾಹಿಂ, ಸಾಮಾಜಿಕ ಕಾರ್ಯಕರ್ತ ಅರೆನೂರು ಸುಪ್ರೀತ್ ಇದ್ದರು.