ನ್ಯೂಸ್

ಆನೇಕಲ್​ನ ಮುತ್ತಿನ ಹನಿಗಳನ್ನಿಡುವ ಪ್ರವಾಸಿ ತಾಣದಲ್ಲಿ ಕುಡುಕರ ಮತ್ತಿನ ಗಮ್ಮತ್ತು…

ಆನೇಕಲ್: ಆನೇಕಲ್​ನ ಹೆಸರಾಂತ ಪ್ರವಾಸಿ ತಾಣಕ್ಕೆ ಕುಡುಕರೆ ಕಂಟಕ ಶುರುವಾಗಿದೆ. ಬೆಂಗಳೂರು ಹೊರವಲಯದಲ್ಲಿ ಇರುವ ಈ ಪ್ರವಾಸಿ ತಾಣದಲ್ಲಿ ಹೆಚ್ಚಾಗಿ ಪ್ರೇಮಿಗಳೇ ಬರುತ್ತಿದ್ದರು. ಆದರೆ ಇದೀಗ ಪ್ರವಾಸಿಗರಿಗಿಂತ ಬರುವ ಕುಡುಕರೆ ಹೆಚ್ಚಾಗಿದ್ದಾರೆ.

ಬೆಂಗಳೂರು ಹೊರವಲಯದ ಮುತ್ಯಾಲಮಡುವು ಪ್ರವಾಸಿ ತಾಣವನ್ನು ಮುತ್ತಿನ ಹನಿಗಳನ್ನು ಇಡುವ ತಾಣ ಎಂದೇ ಕರೆಯಲಾಗುತ್ತದೆ. ಆದರೆ ಇದೀಗ ಇಲ್ಲಿ ಪೊಲೀಸ್ ಭದ್ರತೆಯ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ಮತ್ತಿನ ಗಮ್ಮತ್ತು ಮಾಡುತ್ತಿದ್ದಾರೆ. ಈ ಪ್ರವಾಸಿ ತಾಣ ಆನೇಕಲ್ಲಿನಿಂದ ಏಳು ಕಿಲೋಮೀಟರ್ ಸಾಗಿದರೆ ಸಿಗುತ್ತದೆ.

ಆದ್ರೆ ಈಗ ಇಲ್ಲಿ ಎಲ್ಲೆಂದರಲ್ಲಿ ಮಧ್ಯಪಾನದ ಬಾಟಲ್​ಗಳ ಹಾವಳಿ ಇದೆ. ಕುಡುಕರ ರಂಪಾಟದಿಂದ ಪ್ರವಾಸಿಗರಿಗೆ ಮುಜುಗರವೂ ಉಂಟಾಗುತ್ತಿದೆ. ಸೂಕ್ತ ಭದ್ರತೆ ಇಲ್ಲದೇ ಇರುವುದರಿಂದ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ.