ನ್ಯೂಸ್

VIDEO| ಈ ಅಂಗಡಿಯಲ್ಲಿ ಎಣ್ಣೆ ಖರೀದಿಸುವವರಿಗೆ ಮಾಲೀಕರು ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ, ಅದು ಏನು?

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ ವೈನ್‌ಶಾಪ್‌ವೊಂದರ ಮುಂಭಾಗದಲ್ಲಿ ಮದ್ಯಪ್ರಿಯರ ಸೌಲಭ್ಯಕ್ಕಾಗಿ ಶಾಮಿಯಾನ ಹಾಕಿರುವುದು ಲಾಕ್‌ಡೌನ್ ಸಡಿಲದ ಮೊದಲನೇ ದಿನದ ವಿಶೇಷ.

ತೊಕ್ಕೊಟ್ಟಿನ ಹೈಸ್ಪಿರಿಟ್ ವೈನ್‌ಶಾಪ್ ಮುಂಭಾಗ ಉದ್ದ ಸರತಿ ಸಾಲಿತ್ತು, ಬಿಸಿಲಿನ ವಾತಾವರಣ ಇದ್ದುದರಿಂದ ಕ್ಯೂ ನಿಲ್ಲುವವರ ಬವಣೆ ತಪ್ಪಿಸುವುದಕ್ಕಾಗಿ ಮಳಿಗೆಯವರು ಹಿಂದಿನ ದಿನ ಶಾಮಿಯಾನ ಹಾಕಿ ನೆರಳು ಸಿಗುವಂತೆ ಮಾಡಿದ್ದು ಎಣ್ಣೆಪ್ರಿಯರಿಗೆ ತುಸು ನೆರವಾಯಿತು.

ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದಲೇ ಮದ್ಯದಂಗಡಿಗಳ ಮುಂಭಾಗ ಶಿಸ್ತಿನಿಂದ ಕಾದು ನಿಂತು ತಮ್ಮ ಸರದಿ ಬಂದಾಗ ಮದ್ಯ ಖರೀದಿಸಿ ತೆರಳಿದರು. ಯಾವುದೇ ರೀತಿಯ ಗೊಂದಲವಿರಲಿಲ್ಲ. ಲಾಕ್‌ಡೌನ್‌ನ ಹಲವು ಅಂಶಗಳು ಸೋಮವಾರದಿಂದ ಜಿಲ್ಲೆಯಲ್ಲಿ ಸಡಿಲಗೊಂಡಿವೆ. ಅದರಂತೆ ಮಾಲ್‌ಗಳು, ಮಾರ್ಕೆಟ್ ಕಾಂಪ್ಲೆಕ್ಸ್ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಅಗತ್ಯೇತರ ಅಂಗಡಿಗಳೂ ತೆರೆದಿವೆ. ಮೊದಲ ದಿನ ವಾಹನಗಳ ಸಂಚಾರವೂ ಹೆಚ್ಚಾಗಿತ್ತು.