ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ದಿವಂಗತ ನಟ ರಾಜೇಶ್ ಖನ್ನಾ ಮತ್ತು ನಟಿ ಡಿಂಪಲ್ ಕಪಾಡಿಯಾ ಅವರ ಪುತ್ರಿ ಟ್ವಿಂಕಲ್ ಖನ್ನಾ. ನಟ ಅಕ್ಷಯ್ ಕುಮಾರ್ ಅವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ದೂರವಿದ್ದರೂ ಸಹ, ಅವರು ಈಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುವ ಬಾಲಿವುಡ್ ನಟಿ, ಲೇಖಕಿ ಟ್ವಿಂಕಲ್ ಖನ್ನಾ.
" Twinkle Khanna Kumar's+1" ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಕೊಂಚ ಗೊಂದಲಕ್ಕೋಳಗಾದ ನೆಟ್ಟಿಗರು ತೆಲಗೆ ಹುಳ ಬಿಟ್ಟಂತಾಗಿದೆ. ಏನು ನೀವು ಪ್ರಗ್ನೆಂಟ್? ಮತ್ತೆ ತಾಯಿ ಆಗುತ್ತಿದ್ದೀರಾ? ಮನೆಗೆ ಹೊಸ ಅತಿಥಿ ಆಗಮನ ಆಗುತ್ತಿದ್ಯಾ? ಅಕ್ಷಯ್ ಕುಮಾರ್ ತಂದೆ ಆಗುತ್ತೀದ್ದಾರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಆದರೆ, ಟ್ವಿಂಕಲ್ ಖನ್ನಾ ಅವರು ಯಾವ ಅರ್ಥದಲ್ಲಿ " Twinkle Khanna Kumar's+1" ಎಂದು ಹಾಕಿದ್ದಾರೆ ಎನ್ನುವುದು ನಿಗೂಢವಾಗಿದೆ. ಆದರೆ ನೆಟ್ಟಿಗರು ಮಾತ್ರ ನಟಿ ಗರ್ಭಿಣಿ ಎಂದು ತಿಳಿದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಸಲಿ ಸತ್ಯ ಏನು ಎಂದು ತಿಳಿದುಬರಬೇಕಿದೆ. ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. 50 ವರ್ಷದ ನಟಿ ಈಗ ಗರ್ಭಿಣಿಯಾಗಿದ್ದಾರಾ? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಟ್ವಿಂಕಲ್ ಖನ್ನಾ ಕೆಲವೇ ಚಿತ್ರಗಳನ್ನು ಮಾಡಿರಬಹುದು. ಆದರೆ ಅವರು ಬಹು ದೊಡ್ಡ ಫ್ಯಾನ್ಸ್ ಹೊಂದಿದ್ದಾರೆ. 1999 ರ ಚಲನಚಿತ್ರ 'ಬಾದ್‌ಶಾ' ಅವರ ಚಿತ್ರಗಳಲ್ಲಿ ಒಂದಾಗಿತ್ತು, ಇದರಲ್ಲಿ ಅವರು ಶಾರುಖ್ ಖಾನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದರು. ಚಿತ್ರವು ದೊಡ್ಡ ಹಿಟ್ ಆಗಿತ್ತು, ವಿಶೇಷವಾಗಿ ಚಿತ್ರದ ಹಾಡುಗಳು ಇಂದಿಗೂ ಜನಮಾನಸದಲ್ಲಿ ನೆಲೆಸಿದೆ. 2000ನೇ ಇಸವಿಯಲ್ಲಿ ಟ್ವಿಂಕಲ್ ಅಭಿನಯದ ಇನ್ನೊಂದು ಸಿನಿಮಾ ಸೋಲು ಕಂಡಿತ್ತು. ಇದರ ನಂತರ ಸೈನ್ ಮಾಡಿದ ಚಿತ್ರಗಳನ್ನು ಪೂರ್ಣಗೊಳಿಸಿ ಟ್ವಿಂಕಲ್ ನಟನೆಯಿಂದ ಹೊರಗುಳಿದರು. ಟ್ವಿಂಕಲ್ ಖನ್ನಾ ಅವರು ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿರಬಹುದು. ಆದರೆ ಇಂಟೀರಿಯರ್ ಡಿಸೈನರ್ ಮತ್ತು ಬರಹಗಾರರಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರು 'ಮಿಸೆಸ್ ಫನ್ನಿಬೋನ್ಸ್' ಬರಹಗಾರರಾಗಿ ಬಹಳ ಪ್ರಸಿದ್ಧರಾದರು. ಅವರು ಅನೇಕ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ. ಅಷ್ಟೇ ಅಲ್ಲ 2010ರಲ್ಲಿ ನಿರ್ಮಾಪಕಿಯೂ ಆಗಿ ಕೆಲಸ ಮಾಡುತ್ತಿದ್ದಾರೆ.