ನ್ಯೂಸ್

ಈ ಟೈಗರ್​ ಯಾವಾಗಲೂ ಜೀವಂತವಾಗಿರುತ್ತದೆ; ಭಾಯಿಜಾನ್​ ಕುರಿತು ಬಾಲಿವುಡ್​ ಕಿಲಾಡಿ ಹೀಗೇಳಿದ್ದೇಕೆ? | Akshay Kumar

ಮುಂಬೈ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್(Akshay Kumar) ಪ್ರಸ್ತುತ ತಮ್ಮ 'ಕೇಸರಿ ಚಾಪ್ಟರ್ 2' ಸಿನಿಮಾದ ಪ್ರಚಾರದಲ್ಲಿದ್ದಾರೆ. ಈ ಸಿನಿಮಾವು ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಆಧರಿಸಿದೆ. ಈ ಚಿತ್ರ ಏಪ್ರಿಲ್ 18 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಅಕ್ಷಯ್​ ಕುಮಾರ್​​ ಸಲ್ಮಾನ್​ ಖಾನ್​ರ ಸಿಕಂದರ್​ ಸಿನಿಮಾ ಕುರಿತು ಮಾತನಾಡಿರುವ ವಿಡಿಯೋ ವೈಲರ್​ ಆಗಿದೆ.

ಅಕ್ಷಯ್​ ಕುಮಾರ್​ ಅವರನ್ನು ಸಲ್ಮಾನ್ ಖಾನ್ ಅವರ ಸಿಕಂದರ್ ಚಿತ್ರ ಚೆನ್ನಾಗಿ ಪ್ರದರ್ಶನ ಕಾಣಲಿಲ್ಲ ಮತ್ತು ದೊಡ್ಡ ತಾರೆಯರ ಚಿತ್ರಗಳು ಸಹ ಚೆನ್ನಾಗಿ ಪ್ರದರ್ಶನ ಕಾಣುತ್ತಿಲ್ಲ ಎಂದು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅಕ್ಷಯ್​ ಕುಮಾರ್​, ನೋಡಿ ಇದು ತಪ್ಪು. ಹುಲಿ ಜೀವಂತವಾಗಿದೆ ಮತ್ತು ಯಾವಾಗಲೂ ಇರುತ್ತದೆ. ಸಲ್ಮಾನ್ ಜೀವನದಲ್ಲಿ ಎಂದಿಗೂ ಸಾಯದ ತಳಿಯ ಹುಲಿ. ಅವನು ನನ್ನ ಸ್ನೇಹಿತ, ಅವನು ಯಾವಾಗಲೂ ಇರುತ್ತಾನೆ ಎಂದು ಹೇಳಿದ್ದಾರೆ.

ಅಕ್ಷಯ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಲ್ಮಾನ್ ಅಭಿಮಾನಿಗಳು ಇದನ್ನು ದೊಡ್ಡ ಬೆಂಬಲವಾಗಿ ನೋಡುತ್ತಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು. ಒಬ್ಬ ವ್ಯಕ್ತಿ ತನ್ನ ಕಾರಿನಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದ, ನಂತರ ಆತನನ್ನು ಗುಜರಾತ್‌ನಲ್ಲಿ ಬಂಧಿಸಲಾಯಿತು. ಪೊಲೀಸ್ ತನಿಖೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಈ ಘಟನೆಯ ನಂತರ ಸಲ್ಮಾನ್ ಅವರ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಈ ಬಗ್ಗೆ ಅಕ್ಷಯ್ ಕುಮಾರ್ ತಮ್ಮ ಕಳವಳ ವ್ಯಕ್ತಪಡಿಸಿದ್ದು, ದೇಶದ ಕಲಾವಿದರ ಸುರಕ್ಷತೆಯು ಇತರ ನಾಗರಿಕರ ಸುರಕ್ಷತೆಯಷ್ಟೇ ಮುಖ್ಯವಾಗಿದೆ. ಸಲ್ಮಾನ್ ಅವರನ್ನು ಪ್ರತಿಯೊಂದು ಕಷ್ಟವನ್ನೂ ಧೈರ್ಯದಿಂದ ಎದುರಿಸುವ ನಿಜವಾದ ಮತ್ತು ಬಲಿಷ್ಠ ವ್ಯಕ್ತಿ ಎಂದು ಹೊಗಳಿದರು.(ಏಜೆನ್ಸೀಸ್​​)