ನ್ಯೂಸ್

‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾ ಕುರಿತು ಜಯಾ ಬಚ್ಚನ್ ಕಾಮೆಂಟ್​; ಮೂರ್ಖರಷ್ಟೆ ಟೀಕಿಸಬಹುದು ಎಂದಿದ್ದೇಕೆ ಅಕ್ಷಯ್​ ಕುಮಾರ್​ | Akshay Kumar

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್(Akshay Kumar) ಅವರ ಬಹುನಿರೀಕ್ಷಿತ ಸಿನಿಮಾ 'ಕೇಸರಿ: ಅಧ್ಯಾಯ 2' ಏಪ್ರಿಲ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಸಿನಿಮಾದ ಪ್ರಚಾರದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಕ್ಷಯ್​ ಕುಮಾರ್​ ಮುಂಬೈನಲ್ಲಿ 'ಕೇಸರಿ: ಅಧ್ಯಾಯ 2' ಪ್ರೆಸ್​ಮೀಟ್​​​ ನಡೆಸಿದರು. ಜಯಾ ಬಚ್ಚನ್ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಹೆಸರನ್ನು ಟೀಕಿಸಿ ಅದನ್ನು ವಿಫಲ ಚಿತ್ರ ಎಂದು ಕಾಮೆಂಟ್​ ಮಾಡಿದ್ದರ ಕುರಿತು ಅಕ್ಷಯ್‌ ಅವರನ್ನು ಕೇಳಲಾಯಿತು. ಅದಕ್ಕೆ ನಟ ಪ್ರತಿಕ್ರಿಯಿಸಿರುವ ವಿಡಿಯೋ ವೈರಲ್ ಆಗಿದೆ.

ಸಹ ನಟರು ತಮ್ಮ ಸಿನಿಮಾಗಳನ್ನು ಟೀಕಿಸಿದಾಗ ಹೇಗನ್ನಿಸುತ್ತದೆ ಎಂದು ಅಕ್ಷಯ್​ ಕುಮಾರ್​ ಅವರನ್ನು ಕೇಳಲಾಯಿತು. ನಾನು ಮಾಡಿದ ಸಿನಿಮಾವನ್ನು ಮೂರ್ಖರು ಮಾತ್ರ ಟೀಕಿಸುತ್ತಾನೆ. ನಾನು ನಟಿಸಿದ ಅಂತಹ ಹಲವು ಸಿನಿಮಾಗಳಿವೆ. 'ಪ್ಯಾಡ್‌ಮ್ಯಾನ್', 'ಟಾಯ್ಲೆಟ್ ಏಕ್ ಪ್ರೇಮ್ ಕಥಾ', 'ಏರ್‌ಲಿಫ್ಟ್', 'ಕೇಸರಿ 1' ಮಾಡಿದ್ದೇನೆ. ಈಗ 'ಕೇಸರಿ 2' ಮಾಡಲಾಗಿದೆ. ಆದ್ದರಿಂದ ಮೂರ್ಖರು ಮಾತ್ರ ಈ ಸಿನಿಮಾಗಳನ್ನು ಟೀಕಿಸುತ್ತಾರೆ ಎಂದರು.

ಆದರೆ ಬಳಿಕ ಅಕ್ಷಯ್​ ಕುಮಾರ್ ಅವರಿಗೆ, ತಮ್ಮ ಸಿನಿಮಾ ಟಾಯ್ಲೆಟ್​ ಏಕ್​ ಪ್ರೇಮ್​ ಕಥಾ ಚಿತ್ರವನ್ನು ಜಯಾ ಬಚ್ಚನ್ ಟೀಕಿಸಿದ್ದಾರೆಂದು ಕೇಳಲಾಯಿತು. ಅವರು ಹಾಗೇ ಹೇಳಿದ್ದರೆ ಅವರು ಹೇಳಿದ್ದು ಸರಿ. ನಾನು ಅಂತಹ ಸಿನಿಮಾ ಮಾಡುವ ಮೂಲಕ ತಪ್ಪು ಮಾಡಿದ್ದರೆ, ಅವರು ಹೇಳಿದ್ದು ಸರಿ ಇರಬಹುದು ಎಂದು ಅಕ್ಷಯ್ ಹೇಳಿದರು.

ಜಯಾ ಬಚ್ಚನ್ ಹೇಳಿದ್ದೇನು?

'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಬಗ್ಗೆ ಪ್ರಸ್ತಾಪಿಸಿ, ಸಿನಿಮಾ ಹೆಸರನ್ನು ನೋಡಿ; ನಾನು ಅಂತಹ ಹೆಸರಿನ ಚಿತ್ರವನ್ನು ಎಂದಿಗೂ ನೋಡುವುದಿಲ್ಲ. ಇದು ಹೆಸರೇ? ನೀವು ಹೇಳಿ ಅಂತಹ ಹೆಸರಿನ ಚಿತ್ರವನ್ನು ನೀವು ನೋಡಲು ಬಯಸುತ್ತೀರಾ? ನೋಡಿ, ಇಷ್ಟೊಂದು ಜನರಲ್ಲಿ ಕೇವಲ ನಾಲ್ಕು ಜನರು ಮಾತ್ರ ಅಂತಹ ಸಿನಿಮಾವನ್ನು ನೋಡಲು ಬಯಸುತ್ತಾರೆ. ಇದು ತುಂಬಾ ದುಃಖಕರ, ಆ ಸಿನಿಮಾ ವಿಫಲವಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)