ನ್ಯೂಸ್

VIDEO| ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಡ್ಯಾನ್ಸ್ ಮಾಡಿದ ಅಕ್ಷಯ್ ಕುಮಾರ್!

ಮುಂಬೈ: ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿ ಸಿಲುಕಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ಖ್ಯಾತ ಡಾನ್ಸರ್ ನೋರಾ ಫತೇಹಿ ಜತೆ ಕುಣಿದು ಟ್ರೋಲ್ ಆಗಿದ್ದಾರೆ.

ಅಕ್ಷಯ್ ಕುಮಾರ್ ಅವರು ನೋರಾ ಫತೇಹಿ, ದಿಶಾ ಪಟಾನಿ, ಮೌನಿ ರಾಯ್ ಮತ್ತು ಇತರರೊಂದಿಗೆ ಯುಎಸ್​ಎನಲ್ಲಿ 'ದಿ ಎಂಟರ್‌ಟೈನರ್ಸ್ ಟೂರ್' ನಲ್ಲಿದ್ದಾರೆ. ಅಲ್ಲಿ ಕಾರ್ಯಕ್ರಮವೊಂದರಲ್ಲಿ ಅಕ್ಷಯ್ ಕುಮಾರ್ ನಟಿ ನೋರಾ ಜೊತೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ತರಗತಿಯಲ್ಲೇ ಪ್ರಾಣ ಬಿಟ್ಟ ಶಿಕ್ಷಕ

ಅಕ್ಷಯ್ ಕುಮಾರ್ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದಾರೆ. ನೋರಾ ಫತೇಹಿ ಕೆಂಪು ಬಣ್ಣದ ಮಿನಿ ಸ್ಕರ್ಟ್​​ ಧರಿಸಿದ್ದಾರೆ. ವೇದಿಕೆ ಮೇಲೆ ಡಾನ್ಸ್ ಮಾಡುತ್ತಾ ಅಕ್ಷಯ್ ಲೆಹಂಗಾ ಬಿಚ್ಚಿ ಹಾಕಿ ನೋರಾ ಅವರನ್ನು ಎಳೆದಕೊಳ್ಳುತ್ತಾರೆ. ನೋರಾ ಜೊತೆ ಸಖತ್ ಹಾಟ್ ಆಗಿ ಹೆಜ್ಜೆ ಹಾಕಿರುವ ಅಕ್ಷಯ್ ಕುಮಾರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಕ್ಷಯ್ ಮತ್ತು ನೋರಾ ಡಾನ್ಸ್ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಾ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.