Akshay Kumar: ಶುಕ್ರವಾರ ವಿಮಾನ ನಿಲ್ದಾಣವೊಂದರಲ್ಲಿ ಅಕ್ಷಯ್ ಕುಮಾರ್ ನೆಟ್ಟಿಗರ ಕಣ್ಣಿಗೆ ಭಾರೀ ಹಾಸ್ಯಾಸ್ಪದವಾಗಿ ಕಾಣಿಸಿಕೊಂಡಿದ್ದಾರೆ. ಇವರು ಕಪ್ಪು ಟೀ-ಶರ್ಟ್ ಜೊತೆಗೆ ಪಲಾಝೋ ಪ್ಯಾಂಟ್ ಧರಿಸಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ನೋಡಿದ ನೆಟ್ಟಿಗರು ಅವರ ಉಡುಪಿನ ಬಗ್ಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಭವನದಲ್ಲಿ ‘ದ್ರೌಪದಿ ಮುರ್ಮು’ ಅವರನ್ನು ಭೇಟಿಯಾದ ಗಗನಯಾತ್ರಿ ‘ಶುಭಾಂಶು ಶುಕ್ಲಾ’| Draupadi Murmu
ಅಕ್ಷಯ್ ಕುಮಾರ್ ತಮ್ಮ ಪತ್ನಿಯ ಟ್ವಿಂಕಲ್ ಪ್ಯಾಂಟ್ ಧರಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದು, ಇನ್ನು ಕೆಲವರು ಅವರನ್ನು ರಣವೀರ್ ಸಿಂಗ್ ಅವರೊಂದಿಗೆ ಹೋಲಿಸಿದ್ದಾರೆ.
ನೆಟಿಜನ್ಗಳಲ್ಲಿ ಒಬ್ಬರು ಇವರ ವಿಡಿಯೋಗೆ ಕಾಮೆಂಟ್ ಮಾಡಿದ್ದು, ಅವಸರದಲ್ಲಿ ನನ್ನ ಫೈಜಾಮ್ ಹಾಕಿದ್ದೀರಾ.. ಬೇಗ ಮನೆಗೆ ಬಂದು ವಾಪಸ್ ಕೊಟ್ಟು ಹೋಗಿ ಎಂದು ಬರೆದಿದ್ದಾರೆ. ಹಾಗೇ ಇನ್ನೋರ್ವ ನೆಟಿಜನ್ ರಣವೀರ್ ತರ ಕಾಣುತ್ತಿದ್ದೀರ ಎಂದು ಕಮೆಂಟ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಅವರ ಜಾಲಿ ಎಲ್ ಎಲ್ ಬಿ 3, ಭೂತ್ ಬಾಂಗ್ಲಾ, ವೆಲ್ಕಮ್ ಟು ಜಂಗಲ್, ಹೇರಾ ಫೆರಿ 3, ಮತ್ತು ಹೈವಾನ್ ನಂತಹ ಹಲವು ಚಿತ್ರಗಳು ಸಾಲಿನಲ್ಲಿವೆ. ಜಾಲಿ ಎಲ್ ಎಲ್ ಬಿ 3 ಸೆಪ್ಟೆಂಬರ್ 13, 2025 ರಂದು ಬಿಡುಗಡೆಯಾಗಲಿದೆ ಮತ್ತು ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿದೆ.
ಎಲ್‌ಎಲ್‌ಬಿ 3 ಚಿತ್ರವು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು, ಈ ಚಿತ್ರವನ್ನು ನಿಷೆಧಿಸುವಂತೆ ಅರ್ಜಿದಾರರು ಪುಣೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಚಿತ್ರವು ನ್ಯಾಯಾಂಗ ವ್ಯವಸ್ಥೆ ಹಾಗೂ ವಕೀಲರನ್ನು ಅಣಿಕಿಸುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಅಕ್ಷಯ್ ಹಾಗೂ ಅರ್ಷದ್ ಅವರಿಗೆ ಆಗಸ್ಟ್ 28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ನಟರಾಗಲಿ ಅಥವಾ ನಿರ್ಮಾಪಕರಾಗಲಿ ಯಾವುದೇ ಹೇಳಿಕೆ ನೀಡಿಲ್ಲ.
(ಏಜೆನ್ಸೀಸ್)