ಗಂಗಾವತಿ ಜಯನಗರ ಬಳಿ ಮಹಾನ್ ಕಿಡ್ಸ್ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣ, ರಾಧಾ, ರುಕ್ಮಿಣಿ ವೇಷ ಭೂಷಣ ಸ್ಪರ್ಧೆ ಗುರುವಾರ ಜರುಗಿತು. 
ನ್ಯೂಸ್

ಶ್ರೀಕೃಷ್ಣ, ರಾಧೆ ವೇಷಭೂಷಣದಲ್ಲಿ ಮಿಂಚಿದ ವಿದ್ಯಾರ್ಥಿಗಳು

ಗಂಗಾವತಿ: ನಗರದ ಅಕ್ಷರ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಶ್ರೀಕೃಷ್ಣ, ರಾಧಾ ವೇಷಭೂಷಣ ಪ್ರದರ್ಶನವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಮಹಾನ್ ಕಿಡ್ಸ್ ಸ್ಕೂಲ್

ಶ್ರೀಕೃಷ್ಣನ ಅವತಾರಗಳನ್ನು ಪ್ರಸ್ತುತಪಡಿಸಿದ ಮಕ್ಕಳು, ಗಾಯನ ಮತ್ತು ನೃತ್ಯದೊಂದಿಗೆ ಗಮನ ಸೆಳೆದರು. ಶಾಲಾಡಳಿತ ಮಂಡಳಿ ಅಧ್ಯಕ್ಷ ರವಿಚೈತನ್ಯ ರೆಡ್ಡಿ ಮಾತನಾಡಿ, ಮಕ್ಕಳಲ್ಲಿ ಕಲಿಕೆ ಜತೆಗೆ ಸಂಸ್ಕಾರದ ಪಾಠ, ನೈತಿಕ ಮೌಲ್ಯ ಬೆಳೆಸಲಾಗುತ್ತಿದೆ ಎಂದರು. ಮುಖ್ಯ ಶಿಕ್ಷಕಿ ಸತ್ತಿ ಹಿಮಾರೆಡ್ಡಿ ಸೇರಿ ಶಿಕ್ಷಕರು ಮತ್ತು ಪಾಲಕರಿದ್ದರು.

ಮೊಸರು ಗಡಿಗೆ ಒಡೆದ ವಿದ್ಯಾರ್ಥಿಗಳು

ಮಹಾನ್ ಕಿಡ್ಸ್ ಸ್ಕೂಲ್: ನಗರದ ಜಯನಗರ ಬಳಿ ಮಹಾನ್ ಕಿಡ್ಸ್ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣ, ರಾಧಾ, ರುಕ್ಮಿಣಿ ವೇಷ ಭೂಷಣದಲ್ಲಿ ವಿದ್ಯಾರ್ಥಿಗಳು ಗುರುವಾರ ಮಿಂಚಿದರು. ಕೃಷ್ಣನ ಜನ್ಮ, ಬಾಲ್ಯ ಜೀವನ, ಕಾಳಿಂಗ ಮರ್ಧನ, ಗೋಪಿಕೆಯರೊಂದಿಗೆ ಆಟ ಸೇರಿ ವಿವಿಧ ಪ್ರಕಾರಗಳನ್ನು ಪ್ರದರ್ಶಿಸಲಾಯಿತು. ನಂತರ ಮೊಸರು ಗಡಿಗೆ ಒಡೆಯುವ ಮೂಲಕ ಸಮಾರೋಪಗೊಂಡಿತು. ಶಾಲಾಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನಮಠ ಮಾತನಾಡಿದರು. ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕಿಯರಾದ ಕುಮುದಿನಿ, ರೇಷ್ಮಾ, ರಾಗಿಣಿ, ಈರಮ್ಮ, ಶ್ವೇತಾ, ಜ್ಯೋತಿ, ಗೌಸಿಯಾ, ಮೇಘಾ, ತೇಜಸ್ವಿನಿ ಇತರರಿದ್ದರು.

ಹಿರೇಜಂತಕಲ್: ನಗರದ ಹಿರೇಜಂತಕಲ್ 3ನೇ ಅಂಗನವಾಡಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಶ್ರೀಕೃಷ್ಣ, ರಾಧೆ, ರುಕ್ಮಿಣಿ ವೇಷಭೂಷಣದೊಂದಿಗೆ ಬಂದಿದ್ದ ಮಕ್ಕಳು ಕುಣಿದಾಡಿ ಸಂಭ್ರಮಿಸಿದರು. ಅಂಗನವಾಡಿ ಕಾರ್ಯಕರ್ತೆ ಸುನೀತಾ ಅರುಣಕುಮಾರ ಇದ್ದರು.
ಉಚಿತ ಕ್ಷೌರ: ನಗರದ ಶ್ರೀಸಾಯಿ ಹೇರ್ ಡ್ರೆಸಸ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಅಂಧ ಮತ್ತು ಬುದ್ದಿಮಾಂದ್ಯ ಮಕ್ಕಳಿಗೆ ಗುರುವಾರ ಉಚಿತ ಕ್ಷೌರ ಸೇವೆ ಕೈಗೊಳ್ಳಲಾಯಿತು. ಗೋ ಪೂಜೆ ನೆರವೇರಿಸಿದ ನಂತರ ಮಕ್ಕಳಿಗೆ ಕಲಿಕಾ ಸಾಮಾಗ್ರಿ, ವೃದ್ಧರು ಮತ್ತು ಅಸಹಾಯಕರಿಗೆ ಅನ್ನಸಂತರ್ಪಣೆಯೊಂದಿಗೆ ವಸಗಳನ್ನು ವಿತರಿಸಲಾಯಿತು. ಮಂಗಳ ಮುಖಿಯರನ್ನು ಗೌರವಿಸಲಾಯಿತು. ಮಾಲೀಕ ಪಿ.ಸಂತೋಷ ಮಾತನಾಡಿದರು. ಸವಿತಾ ಸಮಾಜದ ಬಳ್ಳಾರಿ ಜಿಲ್ಲಾಧ್ಯಕ್ಷ ತಿಪ್ಪಣ್ಣ, ಕೊಪ್ಪಳ ಜಿಲ್ಲಾಧ್ಯಕ್ಷ ಈ.ಮಾರೇಶ, ತಾಲೂಕಾಧ್ಯಕ್ಷ ಗೋಪಾಲ ಇತರರಿದ್ದರು.