ನ್ಯೂಸ್

ಅನುಪಮ ವಿದ್ಯಾಮಂದಿರದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

Bengaluru - Political - Shivananda Tagadur

ಬೆಂಗಳೂರು:
ಪೀಣ್ಯ 2ನೇ ಹಂತದ ಅಂದ್ರಳ್ಳಿ ಮುಖ್ಯರಸ್ತೆಯಲ್ಲಿರುವ ಅನುಪಮ ವಿದ್ಯಾಮಂದಿರದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯೆಗೆ ಅಧಿದೇವತೆಗಳಾದ ಸರಸ್ವತಿ ಹಾಗೂ ಗಣಪತಿಯನ್ನು ಪೂಜಿಸಲಾಯಿತು. ಗಣಹೋಮವನ್ನು ವಿಧಿವತ್ತಾಗಿ ಮಾಡಿ ಮಕ್ಕಳಿಗೆ ಪೋಷಕರ ಹಸ್ತಗಳಿಂದ ಮಕ್ಕಳ ಕೈಯಲ್ಲಿ ಓಂ, ಶ್ರೀ, ಅ ಎಂಬ ಅಕ್ಷರಗಳನ್ನು ತಿದ್ದಿಸಲಾಯಿತು.
ವಿದ್ಯಾವಾಚಸ್ವತೆಗಳಾದ ಸಂತೋಷ ಗುರೂಜಿ ಅವರು ಮಾತನಾಡಿ, ಮಕ್ಕಳ ಪೋಷಣೆ ಲಾಲನೆ ಪಾಲನೆ ಬಹಳ ಮುಖ್ಯ. ಅಕ್ಷರವನ್ನು ಕಲಿಯಬೇಕು ಹಾಗೂ ಅದರಿಂದ ಸದೃಢವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಮಕ್ಕಳ ಹಿತವನ್ನು ಬಯಸಿ ಸ್ಲೇಟ್‌ಗಳಿಗೆ ಪೂಜೆಯನ್ನು ಮಾಡಿ ಮಕ್ಕಳ ಕೈಯಲ್ಲಿ ಓಂ ಶ್ರೀ ಆ ಎಂಬ ಅಕ್ಷರಗಳನ್ನು ಗುರೂಜಿ ತಿದ್ದಿಸಿದರು. ಪೋಷಕರು ಉತ್ಸಾಹದಿಂದ ತಮ್ಮಮಕ್ಕಳು ಅಭ್ಯಾಸವನ್ನು ಮಾಡುವುದನ್ನು ನೋಡಿ ಸಂತಸ ಪಟ್ಟರು.
ಭಾರತೀಯ ಸಂಸ್ಕೃತಿಯೇ ಮಾಯವಾದ ಈ ಸಮಾಜದಲ್ಲಿ ಮಗುವಿನ ಹಿತಕ್ಕಾಗಿ ನಮ್ಮ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಸಂಸ್ಕಾರವನ್ನು ಕೊಡಲಾಯಿತು.
ಅನುಪಮಾ ವಿದ್ಯಾಮಂದಿರ ಸಂಸ್ಥೆಯ ಸಂಸ್ಥಾಪಕರಾದ ಎಸ್.ಎಲ್. ಕೃಷ್ಣಮೂರ್ತಿಯವರ ಅನುಪಸ್ಥಿತಿಯಲ್ಲಿ ಶಾಲೆ ಮುಖ್ಯೋಪಾಧ್ಯಾಯ ವೆಂಕಟೇಶ್ ಹಾಜರಿದ್ದರು.