ತಿ.ನರಸಿಪುರ ತಾಲೂಕಿನ ತಲಕಾಡು ಪಟ್ಟಣದಲ್ಲಿರುವ ಎನ್.ಆರ್. ಪಟೇಲ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಟಿ.ಎನ್.ಅಶೋಕ್ ಪಟೇಲ್, ಎಂ.ಪಾಲ್ ಪ್ರೇಮ್ ಚಂದ್ ಇತರರು ಹಾಜರಿದ್ದರು.  
ನ್ಯೂಸ್

ತಲಕಾಡು ಪಟೇಲ್ ಶಾಲೆಯಲ್ಲಿ ಅಕ್ಷರಾಭ್ಯಾಸ

ಎ. ಆರ್. ರಘುರಾಮ
ತಿ.ನರಸಿಪುರ: ತಾಲೂಕಿನ ತಲಕಾಡು ಪಟ್ಟಣದಲ್ಲಿರುವ ಎನ್.ಆರ್.ಪಟೇಲ್ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಟಿ.ಎನ್.ಅಶೋಕ್ ಪಟೇಲ್ ಮಾತನಾಡಿ, ಅಕ್ಷರಾಭ್ಯಾಸವು ಪ್ರತಿಯೊಂದು ಮಗುವಿನ ಜೀವನದ ಮಹತ್ವದ ಘಟ್ಟವಾಗಿದೆ. ಇದು ಶಿಕ್ಷಣದ ಮೊದಲ ಹೆಜ್ಜೆ ಎಂದರು.
ಮಕ್ಕಳು ಉತ್ತಮ ಸಂಸ್ಕಾರ ಮತ್ತು ಗುಣಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಆಶಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಂ.ಪಾಲ್ ಪ್ರೇಮ್‌ಚಂದ್ ಕಾರ್ಯಕ್ರಮ ಉದ್ಘಾಟಿಸಿದರು. ಸರಸ್ವತಿ ದೇವಿಯ ಪೂಜೆ ಯೊಂದಿಗೆ ಆರಂಭವಾದ ಪ್ರಕ್ರಿಯೆಯಲ್ಲಿ ಪಾಲಕರ ಸಮುಖ ಮಕ್ಕಳಿಗೆ ಓಂಕಾರ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಯಿತು. ನಂತರ ಕನ್ನಡ ಅಕ್ಷರ ಮಾಲೆಯ ಮೊದಲ ಅಕ್ಷರಗಳನ್ನು ಬರೆಸಿದ್ದು ಗಮನ ಸೆಳೆಯಿತು. ಶಿಕ್ಷಣ ಸಂಸ್ಥೆ ಟ್ರಸ್ಟಿಗಳು, ಶಿಕ್ಷಕರು ಇದ್ದರು.