ಹಾವೇರಿ: ಅಕ್ಕಿಮಠದ ಪೂಜ್ಯರು ಏರ್ಪಡಿಸಿರುವ ಶರಣ ಸಂಸತಿ ಮಹೋತ್ಸವ ವೈವಿಧ್ಯತೆಯಿಂದ ಹಾಗೂ ಅರ್ಥರ್ಪೂಣವಾಗಿ ನಡೆಯಲಿದೆ. ಅವರ ಸಮಾಜಮುಖಿ ಸೇವೆ ಅನನ್ಯವಾಗಿದೆ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಅಕ್ಕಿಮಠದಲ್ಲಿ ಲಿಂ. ಮುಪ್ಪಯ್ಯ ಶಿವಯೋಗಿಗಳ 58ನೇ ಹಾಗೂ ಲಿಂ.ಚನ್ನಬಸವ ಶಿವಯೋಗಿಗಳವರ 11ನೇ ಪುಣ್ಯ ಸ್ಮರಣೋತ್ಸವದ ಆಯೋಜಿಸಿದ್ದ ಶರಣ ಸಂಸತಿ ಉತ್ಸವದ ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿರು.
ಸಮಾಜ ಸೇವೆಯಲ್ಲಿ ಮಠಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಮಠಗಳು ಜನ ಸಮುದಾಯದ ಕ್ಷೇಮವನ್ನು ನೋಡಿಕೊಂಡು ಬಂದಿವೆ, ಅವು ಸಮಾಜ ಸಂಸತಿಯ ಕೇಂದ್ರಗಳಾಗಿ ಸೇವೆ ಸಲ್ಲಿಸುತ್ತಿವೆ ಎಂದರು.
ಹಿರಿಯ ಸಾಹಿತಿ ಸತೀಶ ಕುಲಕಣಿರ್ ಮಾತನಾಡಿ, ಶಿಕ್ಷಣ, ಸಂಸತಿಗೆ ವೀರಶೈವ ಮಠಗಳ ಕೊಡುಗೆ ಅಪಾರವಾಗಿದೆ. ಜಾತಿ-ಧರ್ಮಗಳ ಸಮಾಜದ ಸಂಬಂಧಿ ಸಂಘರ್ಷದಲ್ಲಿ ಸಮಾಜ ನಲುಗುತ್ತಿದೆ. ಅಕ್ಕಿಮಠದ ಪೂಜ್ಯರ ಪರಿಸರ ಕಾಳಜಿ ಪ್ರಗತಿಪರ ಚಿಂತನೆಗಳು ಅನುಕರಣೀಯ ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಜಾಗತೀಕರಣದ ದುಷ್ಪರಿಣಾಮಕ್ಕೆ ತತ್ತರಿಸಿದ ಸಮಾಜಕ್ಕೆ ಶರಣ ಸಂಸತಿ ಕಾಯಕಲ್ಪವಾಗಬೇಕಿದೆ. ಮಠಗಳು ಧಾಮಿರ್ಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸತಿಕ ಕೇಂದ್ರಗಳಂತೆ ಕೆಲಸ ಮಾಡಬೇಕಿದೆ ಎಂದರು.
ಉಡುಪಿಯ ಪ್ರಶಾಂತ ಪೂಜಾರ ಮಾತನಾಡಿ, ನಮ್ಮ ಆಹಾರವೇ ಔಷಧಿಯಾದರೆ ಗೃಹಣಿಯರೇ ವೈದ್ಯರು. ಅತಿಯಾದ ಮೊಬೈಲ್ ಬಳಕೆಯಿಂದ ಬಂಜೆತನ ಹಾಗೂ ಆಯಸ್ಸು ಕ್ಷೀಣಿಸುವುದು ಎಂದು ಎಚ್ಚರಿಸಿದರು.
ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು.
ಹತ್ತಿಮತ್ತೂರಿನ ನಿಜಗುಣ ಶಿವಯೋಗಿ ಸ್ವಾಮೀಜಿ, ಪ್ರಭುಸ್ವಾಮಿಮಠದ ಗುರುಸಿದ್ಧ ಸ್ವಾಮೀಜಿ, ಹನುಮನಹಳ್ಳಿ ಹಾಲಸ್ವಾಮೀಜಿ ಹಾಗೂ ಆನಂದವನದ ಗುರುದತ್ತಮೂತಿರ್ ಚಕ್ರವತಿರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಿಳಾ ಒಕ್ಕೂಟದ 756 ಮಹಿಳೆಯರನ್ನು ಸನ್ಮಾನಿಸಲಾಯಿತು. ವಕೀಲ ನಾಗರಾಜ ಕುಡುಪಲಿ ಸಂಗೊಳ್ಳಿ ರಾಯಣ್ಣನ ನಟನೆ ಪ್ರದಶಿರ್ಸಿದರು.
ಸಮಾರಂಭಕ್ಕೂ ಮುನ್ನ ಬೆಳಗ್ಗೆ ಗ್ರಾಮದಲ್ಲಿ ಸದ್ಭಾವನಾ ಧರ್ಮ ಜಾಗೃತಿ ಪಾದಯಾತ್ರೆಗೆ ಗುಡ್ಡದ ಮಲ್ಲಾಪುರದ ಮುಖಪ್ಪ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು.
ಜಾನಪದ ವಿಶ್ವ ವಿದ್ಯಾಲಯದ ಕುಲಪತಿ- ಡಾ. ಟಿ.ಎಂ. ಭಾಸ್ಕರ, ಪ್ರಮುಖರಾದ ಎಲ್ಲಮ್ಮ ಶ್ಯಾವಿ, ಶಿವಬಸಪ್ಪ ಬಸೇಗೆಣ್ಣಿ, ನಾಗರಾಜ ಬಾಕಿರ್, ಮಲ್ಲಿಕಾರ್ಜುನ ಮಣ್ಣೂರು, ಮಂಜಯ್ಯ ಹಿರೇಮಠ, ಆಂಜನೇಯ ಈಳಗೇರ, ಹೇಮಂತ ಬಸೇಗೆಣ್ಣಿ, ಗುಡ್ಡಪ್ಪ ಚಟ್ರಮ್ಮನವರ, ಸತೀಶ ಈಳಗೇರ ಮತ್ತಿತರರು ಉಪಸ್ಥಿತರಿದ್ದರು.