ನ್ಯೂಸ್

ಅಖಿಲ್ ಅಕ್ಕಿನೇನಿ, ಜೈನಾಬ್ ರಾವ್ಜಿ ಮದುವೆ ದಿನಾಂಕ ಫಿಕ್ಸ್! Akhil Akkineni Wedding Date Fixed

ಹೈದರಾಬಾದ್​: ( Akhil Akkineni Wedding Date Fixed ) ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ಇತ್ತೀಚೆಗೆ ಅದ್ಧೂರಿಯಾಗಿ ವಿವಾಹವಾದರು. ಇದೀಗ ಮತ್ತೊಮ್ಮೆ ಅಕ್ಕಿನೇನಿ ಮನೆಯಲ್ಲಿ ಮತ್ತೆ ಮದುವೆ ಸಮಾರಂಭ ಶುರುವಾಗಲಿದೆ.ಇಷ್ಟು ದಿನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದ ಅಖಿಲ್ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಇತ್ತೀಚೆಗಷ್ಟೇ ಅಖಿಲ್ ಅವರು ಜೈನಾಬ್ ರಾವದ್ಜಿ ಎಂಬ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಹೈದರಾಬಾದ್‌ನಲ್ಲಿರುವ ನಾಗಾರ್ಜುನ ಮನೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಮಾರಂಭ ನಡೆಯಿತು.

ಅಖಿಲ್ ಮತ್ತು ಜೈನಾಬ್ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.   ಈ ಸಂತೋಷದ ಸುದ್ದಿಯನ್ನು ನಾಗಾರ್ಜುನ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ಇದೀಗ ಅಖಿಲ್ ಮದುವೆ ದಿನಾಂಕ ಕೂಡ ಫಿಕ್ಸ್ ಆಗಿದೆ ಎಂದು ಗೊತ್ತಾಗಿದೆ.

ಮಾರ್ಚ್ 24 ರಂದು ಅಖಿಲ್ ಮದುವೆ ನಡೆಯಲಿದೆ. ಈ ಬಗ್ಗೆ ಈಗಾಗಲೇ ಎರಡೂ ಕುಟುಂಬಗಳು ಚರ್ಚೆ ನಡೆಸಿ ದಿನಾಂಕ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ. ಅಖಿಲ್-ಜೈನಾಲ್ ಮದುವೆಯನ್ನು ಅದ್ಧೂರಿಯಾಗಿ ಆಚರಿಸಲು ನಾಗಾರ್ಜುನ ಮುಂದಾಗಿರುವುದು ಗೊತ್ತೇ ಇದೆ.

ಈ ಮದುವೆ ಸಮಾರಂಭಕ್ಕೆ ಹಲವು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎನ್ನಲಾಗಿದೆ. ಇವರ ಮದುವೆಗೆ ಸಿನಿಮಾ ಸೆಲೆಬ್ರಿಟಿಗಳ ಜೊತೆಗೆ ರಾಜಕಾರಣಿಗಳು, ಕ್ರಿಕೆಟಿಗರಿಗೂ ಆಹ್ವಾನ ನೀಡಲಾಗುವುದು ಎಂದು ಗೊತ್ತಾಗಿದೆ.