ನ್ಯೂಸ್

ವೈರಲ್ ಆಯ್ತು ಡೂಪ್ಲಿಕೇಟ್​ ಅಜಯ್​ ದೇವಗನ್​ ವಿಡಿಯೋ! ಈತನನ್ನು ನೋಡಿ ಶಾಕ್​ ಆದ ಪ್ರೇಕ್ಷಕರು; Ajay Devgn

Ajay Devgn | ಬಾಲಿವುಡ್​ ಸೂಪರ್​ಸ್ಟಾರ್​ ಅಜಯ್​ ದೇವನಗನ್​ರಂತೆಯೇ ಕಾಣುವ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಲ್​ಚಲ್​ ಹೆಬ್ಬಿಸಿದ್ದಾನೆ. ಅಜಯ್ ದೇವಗನ್ ಅವರನ್ನು ಹೋಲುವ ವ್ಯಕ್ತಿ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳೇ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ.

ಈತ ನಟನೆ ಮಾಡಿದ್ದ ವಿಡಿಯೋವನ್ನ X ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. ವಿಡಿಯೋದಲ್ಲಿ ಬಿಳಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ ಈತ, ಅಜಯ್ ದೇವಗನ್ ಅವರ ಹಾಡಿಗೆ ರೀಲ್ಸ್​ ಮಾಡಿದ್ದಾನೆ. ಇನ್ನೂ ರಿಯಲ್​ ಅಜಯ್​ ದೇವಗನ್​ ನಟಿಸಿದಂತೆಯೇ ಇವನು ಪೋಸ್​ ಕೊಟ್ಟಿದ್ದು, ಈತನ ಅಭಿನಯ ನೋಡಿದ ವೀಕ್ಷಕರು ಶಾಕ್​ ಆಗಿದ್ದಾರೆ.

ಇನ್ನೂ ಈ ವಿಡಿಯೋ ನೋಡಿದ ಪ್ರೇಕ್ಷಕರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ. ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಇದು AIನಾ? ಎಂದು ಕೆಲ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈತ ಅಜಯ್ ದೇವಗನ್ ಅಲ್ಲ ಎಂದು ತಿಳಿಯುವ ಮೊದಲು ನಾನು ಆ ವಿಡಿಯೋವನ್ನು ಎರಡು ಬಾರಿ ನೋಡಬೇಕಾಯಿತು, ಈ ವ್ಯಕ್ತಿ ಯಾರೆಂದು ಯಾರಾದರೂ ನನಗೆ ಹೇಳಬಲ್ಲಿರಾ ಎಂದು ಆಶ್ಚರ್ಯಚಕಿತರಾದ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಈತ ಅಜಯ್ ದೇವಗನ್ ಅವರ ಕಳೆದುಹೋದ ಸಹೋದರನೇ ಇರಬೇಕು ಎಂದು ಬರೆದಿದ್ದಾರೆ. ಮೀಶೊದಿಂದ ಬಂದ ಅಜಯ್ ದೇವಗನ್ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದ್ದರೂ ಸಹ ಆ ವ್ಯಕ್ತಿ ಯಾರು ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಜಯ್ ದೇವಗನ್ ಅವರ ನಡವಳಿಕೆ, ಅಭಿನಯ, ಹಾಗೂ ಅನುಕರಣೆ ಇಂಟರ್ನೆಟ್​ನಲ್ಲಿ ಸಂಚಲನ ಮೂಡಿಸಿದೆ.