ಮುಂಬೈ; ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕಾರಿಗೆ ಸ್ಥಳೀಯ ಬಸ್ಸೊಂದು(Car Accident) ಬುಧವಾರ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಮುಂಬೈನ ಜುಹಾ ಪ್ರದೇಶದಲ್ಲಿ ಘಟನೆ ನಡೆದಿದೆ. ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.
ರಸ್ತೆಯಲ್ಲಿ ಸಾಕಷ್ಟು ಅವ್ಯವಸ್ಥೆ(ಟ್ರಾಫಿಕ್)ಉಂಟಾದ ಕಾರಣ ಬಸ್ವೊಂದು ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿಗೆಯಾಗಲಿ ಅಥವಾ ಚಾಲಕ ಸೇರಿದಂತೆ ಯಾವುದೇ ರೀತಿಯ ಹಾನಿಯಾಗಿಲ್ಲ. ಅಲ್ಲದೆ, ಅಂಗರಕ್ಷರು ಕೆಳಗಿಳಿದು ಕಾರು ಪರಿಶೀಲನೆ ಮಾಡಿ ಅಲ್ಲಿಂದ ಹೊರಟು ಹೋದರು ಎಂದು ವರದಿಯಾಗಿದೆ.
ಇದನ್ನೂ ಓದಿ:ಉತ್ತರ ದಕ್ಷಿಣ ಭಾರತವನ್ನು ಬೆಸೆಯುವ ಕ್ಷೇತ್ರ ಕದ್ರಿ ಕೇಂದ್ರದ ಮಾಜಿ ಸಚಿವ ಪ್ರೊ.ಸಂಜಯ್ ಪಾಸ್ವಾನ್ ಬಣ್ಣನೆ
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅನೇಕ ಅಭಿಮಾನಿಗಳು, ನಟಿಯ ಸುರಕ್ಷತೆಯ ಬಗ್ಗೆ ಆಘಾತ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)