ನ್ಯೂಸ್

ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ ರೈ| Aishwarya Rai

Aishwarya Rai: ಬಾಲಿವುಡ್ ನಟಿ ಐಶ್ವರ್ಯ ರೈ ತಮ್ಮ ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ, ಕೆಲವು ವ್ಯಕ್ತಿಗಳು ತಮ್ಮ ಹೆಸರು, ಚಿತ್ರ, ಎಐ ಆಧಾರಿತ ಅಶ್ಲೀಲ ವಿಷಯವನ್ನು ಅನಧಿಕೃತವಾಗಿ ಬಳಸುವುದನ್ನು ತಡೆಯುವಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಮಂಗಳವಾರ (ಸೆ. 9) ವರದಿಯಾಗಿದೆ.

ಈ ಕುರಿತು ದೆಹಲಿ ಹೈಕೋರ್ಟ್​ ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ಪ್ರತಿವಾದಿಗಳಿಗೆ ಎಚ್ಚರಿಕೆ ನೀಡುವ ಮಧ್ಯಂತರ ಆದೇಶವನ್ನು ಹೊರಡಿಸುವುದಾಗಿ ಮೌಖಿಕವಾಗಿ ಸುಳಿವು ನೀಡಿದ್ದಾರೆ.'

ನಟಿ ಐಶ್ವರ್ಯ ರೈ ಪರ ವಾದಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ನಟಿ ತನ್ನ ಪ್ರಚಾರ ಮತ್ತು ವ್ಯಕ್ತಿತ್ವದ ಹಕ್ಕುಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಸಂಪೂರ್ಣವಾಗಿ ಅವಾಸ್ತವಿಕ ಅಶ್ಲೀಲ ಛಾಯಾಚಿತ್ರಗಳನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದರು.

ನಟಿಯ ಚಿತ್ರಗಳು, ಹೋಲಿಕೆ ಅಥವಾ ವ್ಯಕ್ತಿತ್ವವನ್ನು ಬಳಸಲು ಅವರಿಗೆ ಯಾವುದೇ ಹಕ್ಕಿಲ್ಲ. ಹಣ ಮಾಡುವ ಉದ್ದೇಶದಿಂದ ಹೆಸರು, ಮಾರ್ಪಿಂಗ್ ಮಾಡಿದ ಚಿತ್ರಗಳನ್ನು ಬಳಸುತ್ತಿದ್ದಾರೆ. ಯಾರದೋ ಲೈಂಗಿಕ ಆಸೆಗಳನ್ನು ಪೂರೈಸಲು ಆಕೆಯ ಹೆಸರು ಮತ್ತು ಹೋಲಿಕೆಯನ್ನು ಬಳಸಲಾಗುತ್ತಿದೆ. ಇದು ತುಂಬಾ ದುರದೃಷ್ಟಕರ" ಎಂದು ವಾದಿಸಿದರು.

ಹೈಕೋರ್ಟ್​ ಮುಂದಿನ ವಿಚಾರಣೆಯನ್ನು ನವೆಂಬರ್ 7 ರಂದು ಜಂಟಿ ರಿಜಿಸ್ಟ್ರಾರ್ ಮುಂದೆ, 2026 ಜನವರಿ 15ರಂದು ನ್ಯಾಯಾಲಯ ಮುಂದೆ ವಿಚಾರಣೆಗೆ ಪಟ್ಟಿ ಮಾಡಿ ಮುಂದೂಡಿತು. (ಏಜೆನ್ಸೀಸ್)