ನ್ಯೂಸ್

8 ಶತ ಕೋಟಿ ಆಸ್ತಿಯ ಒಡತಿ ಈ ಬೆಡಗಿ, ವಿಚ್ಛೇದನದ ಸುದ್ದಿಯಲ್ಲಿದ್ರೂ, ಗಂಡನಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಸಂಪಾದಿಸುತ್ತಿರೋ ಸುಂದರಿ ಯಾರು ಗೊತ್ತಾ..!?

ತನ್ನ ಆಕರ್ಷಕ ಸೌಂದರ್ಯ ಮತ್ತು ಅಸಾಧಾರಣ ಪ್ರತಿಭೆಗೆ ಹೆಸರುವಾಸಿಯಾದ ಐಶ್ವರ್ಯಾ ರೈ ಬಚ್ಚನ್ ಮನರಂಜನಾ ಕ್ಷೇತ್ರದಲ್ಲಿ ಪ್ರಭಾವಿ ವ್ಯಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆಲ್ಲುವುದರಿಂದ ಹಿಡಿದು ಬಾಲಿವುಡ್ ಮತ್ತು ಹಾಲಿವುಡ್ ಎರಡರಲ್ಲೂ ಸ್ಮರಣೀಯ ಪ್ರದರ್ಶನಗಳನ್ನು ನೀಡುವವರೆಗೆ ಈಕೆ ವಿಶ್ವಾದ್ಯಂತ ಪ್ರೇಕ್ಷಕರನ್ನ ಹೊಂದಿದ್ದಾರೆ.

ಬಾಲಿವುಡ್‌ ಮಾತ್ರವಲ್ಲ ಸೌತ್‌ ಸಿನಿಮಾಗಳಲ್ಲಿಯೂ ನಟಿಸಿ ಜನ ಮನ್ನಣೆ ಪಡೆದ ನಟಿ ಐಶ್ವರ್ಯಾ ರೈ ಬಚ್ಚನ್. ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟಿ ಹಾಗು ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಛಾಪನ್ನ ಮೂಡಿಸಿರುವ ನಟಿ.

ಚಲನಚಿತ್ರಗಳ ಹೊರತಾಗಿ ಐಶ್ವರ್ಯಾ ಹಲವು ಬ್ರಾಂಡ್‌ಗಳಿಗೆ ಜಾಹೀರಾತುಗಳನ್ನು ನೀಡುತ್ತಾರೆ. ಒಂದು ಜಾಹೀರಾತು ಕೊಡಲು 6-7 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆ ಎನ್ನಲಾಗಿದೆ. ಅಲ್ಲದೇ ಕೇವಲ ಜಾಹೀರಾತುಗಳಿಂದಲೇ ಐಶ್ವರ್ಉಯ ರೈ ಬಚ್ಚನ್​ 80-90 ಕೋಟಿಯಷ್ಟು ಸಂಪಾದನೆ ಮಾಡುತ್ತಾರೆ ಎನ್ನಲಾಗಿದೆ.

ಐಶ್ವರ್ಯ ರೈ, ಮುಂಬೈ ಅಲ್ಲದೆ, ದುಬೈನ ಸೆಂಚುರಿ ಫಾಲ್ಸ್‌ನಲ್ಲೂ ವಿಲ್ಲಾ ಖರೀದಿಸಿದ್ದು, ಸುಮಾರು 15 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಅಲ್ಲದ ಐಶ್ವರ್ಯ ರೈ ಅನೇಕ ಕಡೆಗಳಲ್ಲಿ ಹೂಡಿಕೆಯನ್ನೂ ಮಾಡಿದ್ದಾರೆ.

8 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಸೇರಿದಂತೆ ಕೋಟಿಗಟ್ಟಲೆ ಬೆಲೆಬಾಳುವ ಆಡಿ, ಲೆಕ್ಸಸ್ ಕೂಡ ಐಶ್​​ ಬಳಿ ಇದೆ.

ತಮ್ಮ ಪತಿ ಅಭಿಷೇಕ್ ಬಚ್ಚನ್‌ಗಿಂತ ನಾಲ್ಕು ಪಟ್ಟು ಹೆಚ್ಚು ಸಂಪಾದಿಸುತ್ತಾರೆ ಎಂದು ಹಲವು ವರದಿಗಳಲ್ಲಿ ಉಲ್ಲೇಖವಿದೆ ಆದರೆ ಈ ಬಗ್ಗೆ ಸ್ಪಷ್ಟನೆ ಇಲ್ಲ. ಅಭಿಷೇಕ್ ಅವರ ಆಸ್ತಿ 200 ಕೋಟಿ ರೂ.ಗಳಾಗಿದ್ದರೆ ಐಶ್ವರ್ಯಾ ಅವರ ಆಸ್ತಿ 828 ಕೋಟಿ ರೂ. ಆಗಿದೆ ಎನ್ನಲಾಗಿದೆ.