ನ್ಯೂಸ್

ಅಭಿಷೇಕ್​ ಬಚ್ಚನನ್ನೇ ಯಾಮಾರಿಸಬಲ್ಲಳು ಈ ಐಶ್ವರ್ಯಾ ರೈ: ಈಕೆ ಅಂದಕ್ಕೆ ನಿದ್ದೆಗೆಡುತ್ತಿದ್ದಾರೆ ಪಡ್ಡೆಹುಡುಗ್ರು..

ನವದೆಹಲಿ: ಬಾಲಿವುಡ್​, ಸ್ಯಾಂಡಲ್​ವುಡ್​, ಹಾಲಿವುಡ್​ ಹೀಗೆ ಎಲ್ಲಾ ಚಿತ್ರರಂಗದ ಸ್ಟಾರ್​ ನಟರುಗಳ ರಿಮೇಕ್​ ಮಾಡುವವರು ಬಹಳಷ್ಟು ಜನರಿರುತ್ತಾರೆ. ಕೆಲವೊಂದಿಷ್ಟು ಜನರು ಸ್ಟಾರ್​ಗಳಿಗೆ ಹೋಲಿಕೆಯಾಗಿ ಅವರ ಅಕ್ಕ ತಮ್ಮನೋ ಅಥವಾ ಅಣ್ಣ ತಂಗಿಯೋ ಎನ್ನುವಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಬಾಲಿವುಡ್​ನ ಚೆಲುವೆ ಐಶ್ವರ್ಯಾ ರೈಗೂ ಸಹ ಒಬ್ಬ ನಕಲಿ ಸಿಕ್ಕಿದ್ದಾರೆ. ಐಶ್ವರ್ಯಾ ನೋಡಿ ನಕಲಿಯನ್ನು ನೋಡಿದರೆ ನಿಜವಾದ ಐಶ್ವರ್ಯಾ ಯಾರು ಎನ್ನುವ ಗೊಂದಲ ಮೂಡಿಸುವಂತಿದ್ದಾರೆ ಈ ನಕಲಿ ಐಶ್ವರ್ಯಾ ರೈ.

ಮರಾಠಿಯ ನಟಿ ಮತ್ತು ಟಿಕ್​ಟಾಕ್​ನ ಸೆಲೆಬ್ರಿಟಿ ಮಾನಸಿ ನಾಯಕ್​ ನೋಡುವುದಕ್ಕೆ ಥೇಟ್​ ಐಶ್ವರ್ಯಾ ರೈ ಥರನೇ ಇದ್ದಾರೆ. ಹುಡುಗರ ನಿದ್ದೆ ಕೆಡಿಸದಂತಹ ನಟಿಯಂತೇ ಇರುವ ಮಾನಸಿ ಐಶ್ವರ್ಯಾರಂತೆಯೇ ಉಡುಗೆ ತೊಡುಗೆಗಳನ್ನು ಹಾಕಿಕೊಂಡು ಫೋಟೋಶೂಟ್​ ಮಾಡಿಸಿದ್ದಾರೆ. ಆ ಫೋಟೋ ನೋಡಿದ ಆಕೆಯ ಮತ್ತು ಐಶ್ವರ್ಯಾಳ ಅಭಿಮಾನಿಗಳು ಆಕೆಗೆ ನಕಲಿ ಐಶ್ವರ್ಯಾ ಎಂದು ಕಾಮೆಂಟ್​ ಮಾಡಿದ್ದಾರೆ. ಸಾವಿರ ಸಾವಿರಷ್ಟು ಲೈಕ್​ ಕಾಮೆಂಟ್​ಗಳನ್ನು ಕೊಟ್ಟು ಆಕೆಗೆ ಪ್ರೋತ್ಸಾಹಿಸಿದ್ದಾರೆ.

ಮಾನಸಿ ಇನ್ಸ್ಟಾಗ್ರಾಮ್​ ಮತ್ತು ಟಿಕ್​ಟಾಕ್​ನಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 9,43,000 ಜನರು ಆಕೆಯನ್ನು ಹಿಂಬಾಲಿಸುತ್ತಿದ್ದಾರೆ. ಟಿಕ್​ಟಾಕ್​ನಲ್ಲಿ 4 ಮಿಲಿಯನ್​ ಜನರು ಮಾನಸಿಯನ್ನು ಹಿಂಬಾಲಿಸುತ್ತಿದ್ದಾರೆ. ಐಶ್ವರ್ಯಾ ರೈ ಅವರ ಸೂಪರ್​ ಹಿಟ್​ ಹಾಡುಗಳು ಮತ್ತು ಡೈಲಾಗ್​ಗಳಿಗೆ ಅವರಂತೆಯೇ ನಟಿಸಿ ಟಿಕ್​ಟಾಕ್​ನಲ್ಲಿ ಅಪ್​ಲೋಡ್​ ಮಾಡುವ ಆಕೆಯ ವಿಡಿಯೋಗಳಿಗೆ ಲಕ್ಷಗಟ್ಟಲೆ ಲೈಕ್​ಗಳು ಬಂದಿವೆ. (ಏಜೆನ್ಸೀಸ್​)