ನ್ಯೂಸ್

ತಪ್ಪಿತು ಮತ್ತೊಂದು ಘೋರ ದುರಂತ! ರನ್​ವೇ ತಪ್ಪಿದ ವಿಮಾನದ 3 ಟೈರ್​ ಸ್ಫೋಟ​, ಇಂಜಿನ್​ ಹಾನಿ | Air India

Air India Plane: ಕೊಚ್ಚಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಇಂದು (ಜು.21) ಬೆಳಗ್ಗೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್​ವೇಯಲ್ಲಿ ಜಾರಿದ ಹಿನ್ನಲೆ ಇಂಜಿನ್​ಗಳು ಹಾನಿಯಾಗಿವೆ.

ಮಳೆಯಿದ್ದ ಹಿನ್ನಲೆ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವಾಗ ಏರ್ ಇಂಡಿಯಾ ವಿಮಾನ ರನ್​ವೇಯಲ್ಲಿ ಜಾರಿದೆ. ಆದರೆ, ಪೈಲಟ್​ ನಿಯಂತ್ರಣದಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಇದರಿಂದ ಮತ್ತೊಂದು ಘೋರ ವಿಮಾನ ದುರಂತ ತಪ್ಪಿದೆ ಎಂದೇ ಹೇಳಬಹುದು. ರನ್​ವೇಯಿಂದ ಹುಲಿನ ಬದಿಗೆ ಜಾರಿದ ವಿಮಾನದ ಇಂಜಿನ್‌ಗಳು ಹಾನಿಯಾಗಿದ್ದು, ಹುಲ್ಲು ಸಿಲುಕಿಕೊಂಡಿರುವುದು ದೃಶ್ಯಗಳಲ್ಲಿ ಸರೆಯಾಗಿದೆ.

ವಿಮಾನವು ಇಳಿದ ನಂತರ, ರನ್‌ವೇಯ ಒಂದು ಬದಿಯಲ್ಲಿ ಏರ್ ಇಂಡಿಯಾ ವಿಮಾನ ದಿಕ್ಕು ತಪ್ಪು ಚಲಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ವಿಮಾನದ ಮೂರು ಟೈರ್​ಗಳು​ ಬ್ಲಾಸ್ಟ್​ ಆಗಿದ್ದು, ಇಂಜಿನ್​ಗಳು ಹಾನಿಗೆ ಒಳಗಾಗಿವೆ.