ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ಏರ್ ಇಂಡಿಯಾ ಒನ್ ವಿಮಾನ ಬಳಸಿದ್ದಾರೆ. ಈ ಹಿಂದೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗೆ ಮೀಸಲಾದ ಇಂತಹ ವಿಮಾನ ಇರಲಿಲ್ಲ. ಈಗ 2 ವಿಮಾನಗಳು ಲಭ್ಯ ಇದ್ದು, ಭಾರತೀಯ ವಾಯುಪಡೆಯ ಉಸ್ತುವಾರಿಯಲ್ಲಿದೆ. ಅಮೆರಿಕದ ಅಧ್ಯಕ್ಷರು ಕೂಡ ಅತ್ಯಾಧುನಿಕ, ಸುರಕ್ಷಿತ ವಿಮಾನವನ್ನು ಹೊಂದಿದ್ದಾರೆ. ಎರಡೂ ಹೈಟೆಕ್ ವಿಮಾನಗಳ ಹೋಲಿಕೆ ಇಲ್ಲಿದೆ...
ಏರ್ಫೋರ್ಸ್ ಒನ್
ಬೋಯಿಂಗ್ 747-200ಬಿಯ ಒಳಭಾಗ ಹೀಗಿದೆ: ಸಂವಹನದ ಕೊಠಡಿ - 386 ಕಿ.ಮೀ. ಉದ್ದದ ವಯರಿಂಗ್ ಹೊಂದಿರುವ ಈ ಕೊಠಡಿ ಅಣ್ವಸ್ತ್ರ ಸ್ಪೋಟದ
ಪ್ರತಿ ರಕ್ಷಣಾ ವ್ಯವಸ್ಥೆ
ಶತ್ರುಗಳ ಕ್ಷಿಪಣಿಗಳ ದಿಕ್ಕು ತಪ್ಪಿಸುವಂತಹ ಕಿರಣಗಳನ್ನು ಹೊರಸೂಸುವ ಉಪಕರಣ, ಭೂಮಿ ಮೇಲೆ ಅಣ್ವಸ್ತ್ರ ಸ್ಪೋಟಗೊಂಡರೂ ಅದನ್ನು ತಾಳಿಕೊಂಡು ಪಾರಾಗಬಲ್ಲ ರಕ್ಷಾ ಕವಚ, ಶತ್ರುಗಳ ರಾಡಾರ್ ಹಾಗೂ ಕ್ಷಿಪಣಿಗಳ ಕಣ್ಣುತಪ್ಪಿಸುವಂತಹ ವಿದ್ಯುನ್ಮಾನ ರಕ್ಷಣಾ ವ್ಯವಸ್ಥೆ, ಎಲ್ಲ ಕಿಟಕಿಗಳಿಗೂ ರಕ್ಷಾ ಕವಚ ಹೊಂದಿರುವ ಗಾಜುಗಳಿವೆ. ಕಚೇರಿ ಮತ್ತು ಮಾಧ್ಯಮ ವಿಭಾಗ, ಸಿಬ್ಬಂದಿ/ ಸಚಿವಾಲಯ ವಿಭಾಗ - 85 ಟೆಲಿಫೋನ್ಗಳು, 19 ಟಿವಿ ಮತ್ತು ಇತರೆ ಸೌಲಭ್ಯ, ಡೈನಿಂಗ್ ರೂಮ್ - 2000 ಜನರಿಗೆ ಊಟ ಸಿದ್ಧಪಡಿಸುವ ಅಡುಗೆಮನೆಯೂ ಇದರಲ್ಲಿದೆ.
ಏರ್ ಇಂಡಿಯಾ ಒನ್
ಈ ವಿಮಾನವು ಅಮೆರಿಕ ಅಧ್ಯಕ್ಷರ ‘ಏರ್ ಫೋರ್ಸ್ ಒನ್’ ರೀತಿಯಲ್ಲೇ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಇದು ಬೋಯಿಂಗ್ 777-300ಇಆರ್ ಮಾದರಿಯದಾಗಿದ್ದು, ನಮ್ಮ ದೇಶದ ಅತಿಗಣ್ಯರ ಅನುಕೂಲಕ್ಕೆ ತಕ್ಕಂತೆ ಮಾಡಿಫೈ ಮಾಡಲಾಗಿದೆ.